ತಿರುವನಂತಪುರಂ: ಜ್ಯೋತಿಷಿಯೊಬ್ಬರ ಮಾತು ನಂಬಿದ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ವಿಷದ ಜ್ಯೂಸ್ ಕುಡಿಸಿ ಹತ್ಯೆ ಮಾಡಿರುವ ಭಯಾನಕ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಗೆ ಮರಣದಂಡನೆ ವಿಧಿಸಿ ತಿರುವನಂತಪುರಂನ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ.
ಈ ತೀರ್ಪು ಹೊರ ಬೀಳುತ್ತಿದ್ದಂತೆ ಗ್ರೀಷ್ಮಾ ನಿರ್ಭಾವಕ್ಕೆ ಒಳಗಾಗಿದ್ದು, ಸಾವನ್ನಪ್ಪಿದ ಯುವಕ ಶರೋನ್ ರಾಜ್ ಕುಟುಂಬಸ್ಥರ ಕಣ್ಣೀರಲ್ಲಿ ಆತನ ಸಾವಿಗೆ ನ್ಯಾಯ ದೊರೆತ ಭಾವದಲ್ಲಿ ಕಣ್ಣೀರಿಗೆ ಜಾರಿದರು. ಮತ್ತೊಂದು ಕಡೆ ಇದೊಂದು ಹೀನಕೃತ್ಯವಾಗಿದ್ದು, ಆರೋಪಿಯು ಯಾವುದೇ ವಿನಾಯಿತಿಗೆ ಅರ್ಹವಾಗಿಲ್ಲ.
Weight Gain: ಈ ಲಕ್ಷಣಗಳು ನಿಮ್ಮಲ್ಲಿ ಕಾಣುತ್ತಿದೆಯಾ..? ನಿಮ್ಮ ದೇಹದ ತೂಕ ಹೆಚ್ಚುತ್ತಿದೆ ಎಚ್ಚರ!
ಯಾವುದೇ ಪ್ರತ್ಯಕ್ಷದರ್ಶಿ ಸಾಕ್ಷ್ಯಿಗಳಿಲ್ಲದಿದ್ದರೂ, ಪೊಲೀಸರು ಉತ್ತಮ ರೀತಿಯ ತನಿಖೆ ನಡೆಸಿದ ಬಗ್ಗೆ ಕೋರ್ಟ್ ಪ್ರಶಂಸೆ ವ್ಯಕ್ತಪಡಿಸಿದೆ. ಪ್ರಕರಣದಲ್ಲಿ ಭಾಗಿಯಾದ ಗ್ರೀಷ್ಮಾ ಸಹೋದರ ಮಾವನಿಗೂ ಮೂರು ವರ್ಷ ಶಿಕ್ಷೆ ವಿಧಿಸಲಾಗಿದ್ದು, ಪ್ರಕರಣದ ಎರಡನೇ ಆರೋಪಿಯಾಗಿರುವ ಗ್ರೀಷ್ಮಾ ತಾಯಿಯನ್ನು ಬಿಡುಗಡೆ ಮಾಡಲಾಗಿದೆ.