ಕೋಲ್ಕತ್ತಾ ವೈದ್ಯೆಯ ರೇಪ್ & ಮರ್ಡರ್ ಪ್ರಕರಣಕ್ಕೆ ದೇಶಕ್ಕೆ ದೇಶವೇ ಬೆಚ್ಚಿ ಬಿದ್ದಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯ ಘೋಷಣೆಗೂ ಮುನ್ನ ಅಪರಾಧಿ ಸಂಜಯ್ ರಾಯ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ಅವರು ತಪ್ಪಿತಸ್ಥರು ಎಂದು ಹೇಳಿದರು.
ಶಿಕ್ಷೆಯ ಬಗ್ಗೆ ಏನಾದರೂ ಹೇಳಲು ಇದೆಯೇ ಎಂದು ನ್ಯಾಯಾಲಯ ಕೇಳಿದಾಗ ತಾನು ತಪ್ಪಿತಸ್ಥನಲ್ಲ, ನಾನು ಯಾವ ತಪ್ಪು ಮಾಡಿಲ್ಲ, ನಾನು ಅಂದು ರುದ್ರಾಕ್ಷಿ ಮಾಲೆಯನ್ನು ಹಾಕಿದ್ದೆ, ಕೆಲವರು ತಪ್ಪೊಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದ್ದಾನೆ.
ಆರ್ಜಿ ಕರ್ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಅಪರಾಧಿ ಸಂಜಯ್ ರಾಯ್ಗೆ ಪಶ್ಚಿಮ ಬಂಗಾಳದ ಸೀಲ್ದಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, ಇದರೊಂದಿಗೆ ನ್ಯಾಯಾಲಯ 50 ಸಾವಿರ ದಂಡವನ್ನೂ ವಿಧಿಸಿದೆ. ಅಲ್ಲದೇ ಸಂತ್ರಸ್ತೆಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ತನ್ನ ಮಗಳನ್ನು ಕೊಂದ ರಾಕ್ಷಸನಿಗೆ ಗರಿಷ್ಠ ಶಿಕ್ಷೆಯಾಗಬೇಕು ಎಂದು ಸಂತ್ರಸ್ತೆಯ ತಂದೆ ಈ ಹಿಂದೆ ಆಗ್ರಹಿಸಿದ್ದರು.