ಹುಬ್ಬಳ್ಳಿ : ನಮ್ಮ ವಿರೋಧಿ ಬಣ ದೆಹಲಿಗೆ ಅಲ್ಲಾ ಬೇಕಿದ್ರೆ ವಾಷಿಂಗ್ಟನ್ ಹೋಗಲಿ ಸತ್ಯ ಸತ್ಯವೇ.. ಈ ಬಗ್ಗೆ ಲೋಫರ್, ಜೇಬುಗಳರ ಹೇಳಿಕೆ ಯಾಕೆಪಡಿತೀರಿ. ಬೇಕಿದ್ದರೆ ವಿಜಯೇಂದ್ರ ಅಪ್ಪನ ಹೇಳಿಕೆ ಪಡೆಯಿರಿ. ನಾವು ವಿಜಯೇಂದ್ರನ ಅಪ್ಪನಂತೆ ಅವರು ಬೇಕಾದ್ದು ಮಾಡಲಿ ಎದುರಿಸಲು ಸಿದ್ಧ. ಅವರಪ್ಪನ ಸಹಿ ನಕಲು ಮಾಡಿದವರಿಗೆ ಏನು ಹೇಳಬೇಕು ಅಂತಾ ವಿಜಯೇಂದ್ರ ವಿರುದ್ಧ ನಕಲಿ ಸಹಿ ಆರೋಪ ಮಾಡಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಎಷ್ಟು ನಕಲಿ ಸಿಹಿಗಳಾಗಿವೆ ತನಿಖೆ ಆಗಲಿ. ಸಿದ್ದರಾಮಯ್ಯ ಅವರಿಗೆ ತಾಕತ್ತು ಇದ್ದ್ರೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಯಾವ ಯಾವ ಸಹಿ ಮಾಡಿದ್ದಾರೆ ಅದು ತನಿಖೆ ಆಗಲಿ. ನಾವು ರಾಜ್ಯಾಧ್ಯಕ್ಷರ ಚುನಾವಣೆಗೆ ಸಿದ್ಧವಾಗಿದ್ದಿವಿ. ನಾವು ನಮ್ಮ ಅಭ್ಯರ್ಥಿ ಹಾಕ್ತೀವಿ. ಹೈಕಮಾಂಡ್ ಮಧ್ಯಪ್ರವೇಶ ಮಾಡಿದ ಚುನಾವಣೆ ಮಾಡಬೇಕು. ಇನ್ನೊಂದು ಡೂಬ್ಲಿಕೇಟ್ ಸಹಿ ಮಾಡಿ ರಾಜ್ಯ ಕೊಳ್ಳೆ ಹೊಡೆಯುವ ಆಸೆ ಇದ್ಯಾ..? ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಇಡಿಯಿಂದ ಮುಡಾ ಆಸ್ತಿ ಜಪ್ತಿ ವಿಚಾರವಾಗಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಯಾರು ಸಾಚಾ ಇಲ್ಲ 185 ಕೋಟಿ ವಾಲ್ಮೀಕಿ ಹಗರಣವನ್ನು ಸಿಎಂ ಒಪ್ಪಿಕೊಳ್ಳ್ತಾರೆ. ಕೇಂದ್ರ ಸರ್ಕಾರದ ಯಾರನ್ನು ಟಾರ್ಗೆಟ್ ಮಾಡಿಲ್ಲ ಆದರೆ ರಾಜ್ಯದಲ್ಲಿ ನನ್ನ ಮತ್ತು ಸಿಟಿ ರವಿ ಟಾರ್ಗೆಟ್ ಮಾಡಿದ್ದಾರೆ. ಹಿಂದೂಗಳ ಪರವಾಗಿ ಮಾತನಾಡಿದ್ರೆ ಕೇಸ್ ಹಾಕುತ್ತಾರೆ. ಆದರೆ ವಿಜಯೇಂದ್ರ ಮೇಲೆ ಪ್ರಕರಣ ದಾಖಲು ಮಾಡಲ್ಲ. ಹಿಂದೂಗಳ ಭಾವನೆ ಕೆರಳಿಸಿ , ರಾಜ್ಯದ ದಂಗೆ ಏಳಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಇಷ್ಟು ಧೈರ್ಯ ಮುಸ್ಲಿಂ ಸಮುದಾಯ ಹೇಗೆ ಬಂದಿದೆ. ಈ ಹಿಂದೆ ನಮ್ಮ ಬಿಜೆಪಿ ಅಧಿಕಾರದಲ್ಲಿ ಏನು ಮಾಡಿಲ್ಲ. ನಾವು ಸಹ ಈ ವಿಚಾರದಲ್ಲಿ ತಪ್ಪು ಮಾಡಿದ್ದೇವೆ. ನಮ್ಮ ಸರ್ಕಾರದಲ್ಲಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದ್ರೆ ಈ ರೀತಿ ಘಟನೆಗಳು ಆಗುತ್ತಿರಲಿಲ್ಲ ಎಂದರು.
ವಿಜಯಪುರದಲ್ಲಿ ಕಾರ್ಮಿಕನ ಮೇಲೆ ಹಲ್ಲೆ ವಿಚಾರವಾಗಿ ಮಾತನಾಡಿ, ಕಾರ್ಮಿಕರ ಮೇಲೆ ಈ ರೀತಿಯಲ್ಲಿ ದೌರ್ಜನ್ಯ ಆಗ ಬಾರದು. ಪೊಲೀಸ್ ನಿಶ್ಚಿತವಾಗಿ ಕ್ರಮ ಕೈಗೊಳ್ಳಬೇಕು. ಇದು ಯಾರು ಮಾಡಿದ್ರೂ ಅಮಾನವೀಯತೆ ಮತ್ತು ಅಮಾನುಷ ಕಾರ್ಮಿಕನ ಮೇಲೆ ಕೈ ಮಾಡಿದ್ದು ದೊಡ್ಡ ತಪ್ಪು ಇದನ್ನು ಯಾರೇ ಮಾಡಿದ್ರು, ಎಷ್ಟೇ ದೊಡ್ಡ ವ್ಯಕ್ತಿ ಇದ್ದ್ರೂ ಕ್ರಮ ಆಗಬೇಕು. ನಾನು ಈ ಬಗ್ಗೆ ಎಸ್ ಪಿ ಅವರೊಂದಿಗೆ ಮಾತನಾಡಿ ಮಾಹಿತಿ ಪಡೆದು, ಕ್ರಮಕ್ಕೆ ಒತ್ತಾಯ ಮಾಡುತ್ತೇನೆ ಎಂದರು.