ಬಿಗ್ ಬಾಸ್ ಅಂದ್ರೆ ಎಲ್ಲಿಲ್ಲದ ಕ್ರೇಜು.. ಕಳೆದ 10 ಸೀಸನ್ಗಳಿ ಸಹ ಸಕ್ಸಸ್ ಫುಲ್ ಆಗಿದ್ದು, ಇದೀಗ 11ನೇ ಸೀಸನ್ ಕೂಡ ಸಖತ್ ಎಂಟ್ರೈನ್ಮೆಂಟ್ ನೀಡಿದ್ದು, ಸೀಸನ್ 11ರ ಫಿನಾಲೆಗೆ ಎಲ್ರೂ ಕಾಯ್ತಿದ್ದಾರೆ. ಜೊತೆಗೆ ವಿನ್ನರ್ ಯಾರಾಗಬಹುದು ಅನ್ನೋ ಲೆಕ್ಕಾಚಾರಗಳು ಶುರುವಾಗಿವೆ. ಇದರ ಬೆನ್ನಲ್ಲೇ ಬಿಗ ಬಾಸ್ ಮನೆಯಲ್ಲಿ ಟಾಸ್ಕ್ ಕೊಟ್ಟಿದ್ದಾರೆ. ಮನದಲ್ಲಿ ಉದುಗಿರುವ ಕೋಪ, ಬೇಸರ, ಅತಾಶೆಯನ್ನು ಹೊಡೆಯುತ್ತಾ ಮನದೊಳಗೆ ಇರುವ ಭಾರವನ್ನು ಇಳಿಸಬೇಕು.
ಬಿಗ್ಬಾಸ್ ಹೇಳಿರುವುದು ಏನೆಂದರೆ ಮನೆಯೊಳಗೆ ನಮಗೆ, ಯಾರ ಮೇಲೆ ಕೋಪ ಇದೆಯೋ ಅವರ ಫೋಟೋವನ್ನು ಗೊಂಬೆ ತಲೆಯಾಗಿರುವ ಮಡಿಕೆಗೆ ಅಂಟಿಸಿ, ಕೋಲಿನಿಂದ ಹೊಡೆಯಬೇಕು ಎಂದು ಟಾಸ್ಕ್ ಕೊಡಲಾಗಿದೆ. ಈ ಟಾಸ್ಕ್ನಲ್ಲಿ ಭವ್ಯ ಅವರು ತ್ರಿವಿಕ್ರಮ್ ಅವರ ಫೋಟೋ ಅಂಟಿಸಿ ತಮಗೆ ಇಷ್ಟ ಬಂದಂತೆ ಹೊಡೆದಿದ್ದಾರೆ. ಇದರಿಂದ ಈ ಇಬ್ಬರ ಮಧ್ಯೆದ ಸ್ನೇಹ ಯಾವುದು ಇಲ್ಲ ಎನ್ನುವುದು ಸ್ಪಷ್ಟವಾಗಿದೆ.
ಮೋಕ್ಷಿತಾ ಕೂಡ ತ್ರಿವಿಕ್ರಮ್ ಫೋಟೋಗೆ ದೊಡ್ಡ ಏಟು ಹಾಕಿ ಮಡಿಕೆಯನ್ನು ಪುಡಿ ಪುಡಿ ಮಾಡಿದ್ದಾರೆ. ಇದರಿಂದ ಮನೆಯಲ್ಲಿ ತ್ರಿವಿಕ್ರಮ್ ಮೇಲೆ ಕೋಪ-ತಾಪ, ಹತಾಶೆ ಎಲ್ಲವನ್ನು ಭವ್ಯ, ಮೋಕ್ಷಿತಾ ಇಟ್ಟುಕೊಂಡಿದ್ದರು ಎನ್ನುವುದು ಸ್ಪಷ್ಟವಾಗಿದೆ. ಭವ್ಯದೋ ಅಥವಾ ಮೋಕ್ಷಿತಾದೋ ಈ ಇಬ್ಬರಲ್ಲಿ ಒಬ್ಬರ ಫೋಟೋಕ್ಕೆ ಹನುಮಂತು ಹೊಡೆದು ಮಡಿಕೆಯನ್ನ ನಾಶ ಮಾಡಿದ್ದಾರೆ.
ಅಲ್ಲದೇ ರಜತ್ ಕೂಡ ಹನುಮಂತು ಫೋಟೋಗೆ ಹೊಡೆದಂತೆ ಇದೆ. ಆದರೆ ರಜತ್ ಹಾಗೂ ಹನುಮಂತು ಯಾರ ಫೋಟೋಗೆ ಹೊಡೆದಿದ್ದಾರೆ ಎನ್ನುವುದು ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ. ಇನ್ನು ಉಗ್ರಂ ಮಂಜು, ರಜತ್ ಫೋಟೋಗೆ ಹೊಡೆದು ಕೆಂಡ ಕಾರಿದ್ದಾರೆ. ರಜತ್ ಹಾಗೂ ಮಂಜುವಿನ ನಡುವೆ ದೊಡ್ಡ ಮಾತಿನ ಸಮರವೇ ನಡೆದಿದೆ. ಮನೆಯಲ್ಲಿ ಈ ಹಿಂದೆ ನಡೆದಂತ ಕೆಲ ಘಟನೆಗಳನ್ನ ನೆನಪಿಸಿ ಇಬ್ಬರು ಬೈದಾಡಿಕೊಂಡಿದ್ದಾರೆ.