ವಿಜಯಪುರ: ವಿಜಯಪುರ ನಗರದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಇಟ್ಟಂಗಿ ಬಟ್ಟಿಯಲ್ಲಿ ಮೂವರು ಕಾರ್ಮಿಕರನ್ನು ಕೂಡಿ ಹಾಕಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಖೇಮು ರಾಠೋಡ ಎಂಬಾತ ಇಟ್ಟಂಗಿ ಬಟ್ಟಿ ಮಾಲೀಕನ ವಿರುದ್ದ ಹಲ್ಲೆ ಆರೋಪ ಕೇಳಿ ಬಂದಿದೆ.
ಸದಾಶಿವ ಬಸಪ್ಪ ಮಾದರ (27), ಸದಾಶಿವ ಚಂದ್ರಪ್ಪ ಬಬಲಾದಿ ( 38), ಉಮೇಶ ಮಾಳಪ್ಪ ಮಾದರ (25) ಎಂಬಾತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಹಲ್ಲೆಯ ಬಳಿಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಸದ್ಯ ಮೂವರು ಕಾರ್ಮಿಕರು ಕಳೆದ ಮೂರು ದಿನಗಳಿಂದ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Accident: 2 ಬೈಕ್ ಗಳ ನಡುವೆ ಆಕಸ್ಮಿಕ ಡಿಕ್ಕಿ: ಕೂದಲೆಳೆಯಲ್ಲಿ ಪಾರಾದ ಬೈಕ್ ಸವಾರ!
ಈ ಕಾರ್ಮಿಕರು ಪ್ರತಿದಿನ 600 ಕೂಲಿ ಪಡೆಯುತ್ತಿದ್ದರು. ಕಳೆದ ಸಂಕ್ರಾಂತಿ ಹಬ್ಬಕ್ಕೆಂದು ಮನೆಗೆ ತೆರಳಿದ್ದರು. ಹಬ್ಬ ಮುಗಿಸಿ 16 ರಂದು ವಾಪಸ್ ಬಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಇಟ್ಟಂಗಿ ಬಟ್ಟಿ ಮಾಲೀಕನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಎಪಿಎಂಸಿ ಠಾಣಾ ಪಿಎಸ್ಐ ಜ್ಯೋತಿ ಭೇಟಿ ನೀಡಿದ್ದರು. ಆದರೆ ಘಟನಾಸ್ಥಳ ಗ್ರಾಮೀಣ ಠಾಣಾ ವ್ಯಾಪ್ತಿಗೆ ಬರುತ್ತೆ ಎಂದು ವಾಪಸ್ ತೆರಳಿದ್ದಾರೆ. ಸದ್ಯ ಸ್ಥಳದಿಂದ ಖೇಮು ರಾಠೋಡ್ ಪರಾರಿಯಾಗಿದ್ದಾನೆ.