ತುಮಕೂರು:- ಹೃದಯಾಘಾತದಿಂದ 18ರ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ತುಮಕೂರಿನ ಪಾವಗಡ ಪಟ್ಟಣದಲ್ಲಿ ಘಟನೆ ಜರುಗಿದೆ.
ವಿವಾಹಿತ ಸ್ತ್ರೀ ಜೊತೆ ಓಡಿ ಹೋದ ಗಂಡ: ಠಾಣೆ ಮುಂದೆ ಕಣ್ಣೀರು ಹಾಕ್ತಿರುವ ಮಹಿಳೆ!
ಮೈಥಿಲಿ ಮೃತ ವಿದ್ಯಾರ್ಥಿನಿ. ಮಧುಗಿರಿ ತಾಲ್ಲೂಕು ಮಿಡಿಗೇಶಿಯ ವೈಥಿಲಿ ಪಾವಗಡದ ಕಾಲೇಜಿನಲ್ಲಿ ಓದುತ್ತಿದ್ದಳು. ತರಗತಿ ಮುಗಿಸಿಕೊಂಡು ಹೊರಟಿದ್ದ ಆಕೆ ಚಳ್ಳಕೆರೆ ಕ್ರಾಸ್ ಬಳಿ ಕುಸಿದು ಬಿದ್ದಿದ್ದಾಳೆ.
ಕೂಡಲೇ ವಿದ್ಯಾರ್ಥಿನಿಯನ್ನು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ.