ಕನ್ನಡ ಚಿತ್ರರಂಗದ ಖ್ಯಾತ ನಟರಾದ ದುನಿಯಾ ವಿಜಯ್ ಹಾಗೂ ಲೂಸ್ ಮಾದ ಯೋಗೇಶ್ ನಡುವೆ ಮನಸ್ತಾಪ ಇದೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿ ಬರ್ತಿತ್ತು. ಆದರೆ ಇದುವರೆಗೂ ಇಬ್ಬರು ಈ ಬಗ್ಗೆ ಎಲ್ಲಿಯೂ ಪಬ್ಲಿಕ್ ಆಗಿ ಮಾತನಾಡಿರಲಿಲ್ಲ. ಇದೀಗ ದುನಿಯಾ ವಿಜಯ್ ಜೊತೆಗಿನ ಮನಸ್ತಾಪದ ಬಗ್ಗೆ ಲೂಸ್ ಮಾದ ಯೋಗೇಶ್ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಹುಟ್ಟಿಕೊಂಡ ಬೆನ್ನಲ್ಲೇ ನಟ ಲೂಸ್ ಮಾದ ಯೋಗೇಶ್ ಸ್ಪಷ್ಟನೆ ನೀಡಿದ್ದಾರೆ. ಸಿದ್ಲಿಂಗು-2 ಸುದ್ದಿಗೋಷ್ಠಿಯಲ್ಲಿ ಇಬ್ಬರ ವೈಮನಸ್ಸಿನ ಕುರಿತು ಲೂಸ್ ಮಾದ ಸ್ಪಷ್ಟನೆ ನೀಡಿದ್ದಾರೆ. ದುನಿಯಾ ವಿಜಯ್ ಹಾಗೂ ನನಗೆ ಕಿರಿಕ್ ಆಗಿದ್ದು ನಿಜ. ಆದರೆ ಈಗ ಚೆನ್ನಾಗಿದ್ದೇವೆ ಎಂದಿದ್ದಾರೆ.
ದುನಿಯಾ ನಂತರ ಒಟ್ಟಿಗೆ ನಟಿಸಿಲ್ಲ. ಮಾ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಆದರೆ ಎಲ್ಲೋ ಮಿಸ್ ಹೊಡೀತು, ಕೂಡಿ ಬರಲಿಲ್ಲ. ಸದ್ಯಕ್ಕೆ ವಿಜಯ್ ಹಾಗೂ ನನ್ನ ಫ್ರೆಂಡ್ಶಿಪ್ ಚೆನ್ನಾಗಿದೆ. ಎರಡೂ ಫ್ಯಾಮಿಲಿಯವರೂ ಚೆನ್ನಾಗಿದ್ದೇವೆ. ಮುಂದೆ ಪಾತ್ರ ಕೂಡಿಬಂದರೆ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತೇವೆ ಎಂದು ಲೂಸ್ ಮಾದ ಯೋಗಿ ಹೇಳಿದ್ದಾರೆ.