ಅಬುಜ: ನೈಜೀರಿಯಾದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು ಗ್ಯಾಸೋಲಿನ್ ಟ್ಯಾಂಕರ್ ಏಕಾಏಕಿ ಸ್ಫೋಟಗೊಂಡು 70 ಜನರು ಸಾವನ್ನಪ್ಪಿದ್ದರೆ 56ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಏಜೆನ್ಸಿ ಮುಖ್ಯಸ್ಥ ಹುಸೇನಿ ಇಸಾ ಮಾಹಿತಿ ನೀಡಿದ್ದಾರೆ.
ಇಂಧನ ವರ್ಗಾವಣೆ ವೇಳೆ ಅಪಘಾತ ಸಂಭವಿಸಿದ್ದು, ಒಂದು ಟ್ಯಾಂಕರ್ನಿಂದ ಇನ್ನೊಂದು ಟ್ಯಾಂಕರ್ಗೆ ಪೆಟ್ರೋಲ್ ವರ್ಗಾವಣೆ ಮಾಡಲಾಗುತ್ತಿತ್ತು. ಈ ವೇಳೆ ಟ್ಯಾಂಕರ್ನಲ್ಲಿ ಸ್ಫೋಟ ಸಂಭವಿಸಿದ್ದು ಅನಿಲ ವರ್ಗಾಯಿಸುತ್ತಿದ್ದ ಜನರನ್ನು ಜೀವಂತವಾಗಿ ಸುಟ್ಟು ಹೋಗಿದ್ದಾರೆ.
ನೈಜರ್ನ ಗವರ್ನರ್ ಮೊಹಮದ್ ಬಾಗೊ ಹೇಳಿಕೆಯಲ್ಲಿ ರಾಜ್ಯದ ಡಿಕ್ಕೊ ಪ್ರದೇಶದ ಹಲವಾರು ನಿವಾಸಿಗಳು ಗ್ಯಾಸೋಲಿನ್ ಟ್ಯಾಂಕರ್ನಿಂದ ಭಾರಿ ಸ್ಫೋಟದಿಂದ ಗಾಯಗೊಂಡಿದ್ದಾರೆ , ಬಾಗೋ ಅನೇಕರು ಸುಟ್ಟು ಕರಕಲಾದರು. ಟ್ಯಾಂಕರ್ ನಿಂದ ದೂರ ಇದ್ದವರು ಎಂದು ತಿಳಿಸಿದರು. ಅವರು ಗಾಯದಿಂದ ಪಾರಾಗಿದ್ದಾರೆ. ಇದೊಂದು ದುರದೃಷ್ಟಕರ ಘಟನೆ ಎಂದಿದ್ದಾರೆ.
ಜನರು ಹತ್ತಿರ ಹೋಗದಂತೆ ತಡೆಯಲಾಗುತ್ತಿದೆ. ಇದರ ಹೊರತಾಗಿಯೂ ಇಂಧನ ಖರೀದಿಸಲು ಜನಸಾಗರವೇ ನೆರೆದಿತ್ತು. ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎಂದು ಸುಕ್ವಾಮ್ ತಿಳಿಸಿದ್ದಾರೆ. ಸೆಪ್ಟೆಂಬರ್ನಲ್ಲಿ ನೈಜೀರ್ನ ಜನನಿಬಿಡ ಹೆದ್ದಾರಿಯಲ್ಲಿ ಪೆಟ್ರೋಲ್ ತುಂಬಿದ ಟ್ಯಾಂಕರ್ ಸ್ಫೋಟಗೊಂಡಿತ್ತು.