ಧಾರವಾಡ : ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ನಡೆದ ಸ್ವಾಮಿತ್ವ ಯೋಜನೆ ಸರ್ವೇ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡಿದರು. ಮಡಕಿಹೊನ್ನಳ್ಳಿ ಗ್ರಾಮದಲ್ಲಿ ಶನಿವಾರ ಸ್ವಾಮಿತ್ವ ಯೋಜನೆಯಡಿ ಡೋನ್ ಸರ್ವೇ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮವಾಸಿಗಳ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಯೋಜನೆ ಮಾಡಿದೆ. ರಾಜ್ಯದ ಪ್ರತಿ ಗ್ರಾಮವನ್ನು ಸ್ವಾಮಿತ್ವ ಯೋಜನೆಯಡಿ ಸಮೀಕ್ಷೆ ಮಾಡಿ, ಕಾನೂನಾತ್ಮಕವಾಗಿ ಗ್ರಾಮ ನಿವಾಸಿಗಳ ಆಸ್ತಿ ಗುರುತಿಸುವಿಕೆ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದರು.
8 ಮರಿಗಳಿಗೆ ಜನ್ಮ ನೀಡಿದ ತೋಳ : ಮರಿಗಳ ರಕ್ಷಣೆಗೆ ಕ್ರಮವಹಿಸಿದ ಅರಣ್ಯ ಇಲಾಖೆ
ಹೊಸ ಯೋಜನೆ ಆಗಿರುವುದರಿಂದ ಪರಸ್ಪರರಲ್ಲಿ ಸಮಸ್ಯೆಯುಂಟಾಗುವುದು ಸಹಜ. ಊರಿನ ಪ್ರಮುಖರು, ಜನಪ್ರತಿನಿಧಿಗಳು ಸಹಕಾರ ನೀಡಿ ಸಮಸ್ಯೆ ಬಗೆ ಹರಿಸಬೇಕು. ಡೋನ್ ಮೂಲಕ ಏರೀಯಲ್ ಸರ್ವೇ ಮತ್ತು ರೋವರ್ ಸರ್ವೇ ಎರಡನ್ನು ಗ್ರಾಮವಾಸಿಗಳ ಆಸ್ತಿ ನಿಖರತೆಗೆ ಡೋನ್ ಸಮೀಕ್ಷೆ ಮಾಡಲಾಗುತ್ತದೆ. ಇದು ಭವಿಷ್ಯತ್ತಿನಲ್ಲಿ ಬಹಳಷ್ಟು ಉಪಯೋಗವಾಗುತ್ತದೆ ಎಂದರು. ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕ ಮೋಹನ ಶಿವಣ್ಣವರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರದ ಜಂಟಿ ಯೋಜನೆ ಇದಾಗಿದ್ದು, ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಡೋನ್ ಮೂಲಕ ಸಮಿಕ್ಷೆ ಮಾಡಿ, ಆಸ್ತಿ ಗುರುತಿಸಲಾಗುತ್ತದೆ. ಭೂಮಾಪನ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ, ನಿವಾಸಿಗಳ ಆಸ್ತಿ ದಾಖಲಿಸುವ ಕಾರ್ಯಕ್ಕೆ ಮತ್ತು ಗಡಿ ಗುರುತಿಸುವಿಕೆಗೆ ಸಹಕರಿಸಬೇಕು. ದಾಖಲೀಕರಣ ಪೂರ್ವದಲ್ಲಿ ಮಾಲೀಕರಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು 30 ದಿನಗಳ ಕಾಲವಾಕಾಶ ಇರುತ್ತದೆ. ಎಲ್ಲರೂ ಸಹಕಾರ ನೀಡಬೇಕು ಎಂದರು.
ಈ ವೇಳೆ ತಹಶೀಲ್ದಾರ ವೀರೇಶ ಮುಳಗುಂದಮಠ, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಕಲಘಟಗಿ ಭೂದಾಖಲೆಗಳ ಸಹಾಯಕ ನಿರ್ದೇಶಕ ಮಂಜೇಶ, ಮಡಕಿಹೊನ್ನಳ್ಳಿ ಗ್ರಾಪಂ ಅಧ್ಯಕ್ಷ ಬಸವರಾಜ ಪರ್ವಾಪುರ, ಉಪಾಧ್ಯಕ್ಷೆ ರೇಣುಕಾ ಕುಬಿಹಾಳ, ಶಿವಪುತ್ರಪ್ಪ ಆಲದಕಟ್ಟಿ, ಮಂಜುನಾಥ ಮರಳ್ಳಿ, ಪಿಡಿಒ ಶಂಭುಲಿಂಗ ಹೊಸಮನಿ, ಗ್ರಾಮಲೆಕ್ಕಾಧಿಕಾರಿ ಮಂಜುನಾಥ ಸೇರಿದಂತೆ ಇತರರು ಇದ್ದರು.