ವಿಜಯಪುರ:- ವಿಜಯಪುರ ಜಿಲ್ಲೆಯಲ್ಲಿ ಮಾದರಿ ಮದುವೆಯೊಂದು ನಡೆದಿದೆ. ಜಿಲ್ಲೆಯ ತಿಕೋಟಾ ಪಟ್ಟಣದ ನಿವೃತ್ತ ಶಿಕ್ಷಕ ಹಾಗೂ ಸಾವಯವ ಕೃಷಿಕ ಸಿದ್ದಪ್ಪ ಭೂಸಗೊಂಡ ಅವರ ಅಮೀತ ಹಾಗೂ ಅಮೃತ್ ಅವರ ವಿವಾಹ ಕಾರ್ಯಕ್ರಮ ವಿಶೇಷವಾಗಿತ್ತು. ಇಲ್ಲಿ ಇತರೆ ಮದುವೆಗಳಂತೆ ಯಾವುದೆ ಆಡಂಭರವಿರಲಿಲ್ಲ. ಬದಲಾಗಿ, ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು.
ಮಧುಮೇಹಕ್ಕೆ ಇದು ಬೆಸ್ಟ್ ಔಷಧಿ: ಬೇಯಿಸಿ ತಿಂದ್ರೆ ಇದರ ಬೆನಿಫಿಟ್ ಸಾಕಷ್ಟು!
ನಗರದ ಜಿಕೆ ಪಾಟೀಲ್ ಸಭಾ ಭವನದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಬಂದ ಸಾವಿರಾರು ಜನರಿಗೆ ಸಾವಯವ ಕೃಷಿ, ಆಹಾರ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಚಿಂತನಾ ಗೋಷ್ಠಿಗಳನ್ನು ನಡೆಸಲಾಯಿತು. ಇಂಡಿಯ ಪರಮ ಪೂಜ್ಯ ಡಾ. ಸ್ವರೂಪಾನಾಂದ ಸ್ವಾಮೀಜಿ, ಹೈದರಾಬಾದ್ನ ಭಾರತೀಯ ಸಿರಿಧಾನ್ಯ ಸಂಶೋಧನಾ ಕೇಂದ್ರ ಸಂಶೋಧಕ ಡಾ. ಬಿ ಸಿ ಸಂಗಪ್ಪ, ಕೃಷಿ ಮಹಾವಿದ್ಯಾಲಯ ವಿಜಯಪುರದ ಸಹ ವಿಸ್ತರಣಾ ನಿರ್ದೇಶಕರಾದ ಡಾ. ರವೀಂದ್ರ ಬೆಳ್ಳಿ ಅವರು ಕೃಷಿ, ಸಾವಯವ ಕೃಷಿ ಹಾಗೂ ಸಿರಿಧಾನ್ಯಗಳ ಬಳಕೆ ಆಹಾರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮಹಿಳಾ ವಿವಿಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ ಗೌರವ ಉಪಸ್ಥಿತಿಯಲ್ಲಿ ಗೋಷ್ಠಿಗಳು ನಡೆದವು. ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಬಂಧುಗಳು ಹಾಗೂ ಜನರು ವಿಶೇಷ ಮದುವೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮದುವೆ ಕಾರ್ಯಕ್ರಮ ಸಿರಿಧಾನ್ಯ ಕಲ್ಯಾಣೋತ್ಸವ ಕೃಷಿ ಚಿಂತನಗೋಷ್ಠಿಯ ಪ್ರತೀಕವಾಗಿತ್ತು. ಮದುವೆ ಜೋಡಿಗಳನ್ನು ಆಶಿರ್ವದಿಸಿ ಹಾರೈಸಲು ಬಂದವರು ಕೃಷಿ ಚಿಂತನೆ ಗೋಷ್ಠಿ ಹಾಗೂ ಸಾವಯವ ಕೃಷಿಯ ಜೊತೆಗೆ ಸಾವಯವ ಆಹಾರದ ಬಗ್ಗೆ ತಿಳಿದುಕೊಂಡರು.
ಮದುವೆ ಕಾರ್ಯಕ್ರಮ ಚಿಂತನಾ ಗೋಷ್ಠಿಗೆ ಮಾತ್ರ ಸೀಮಿತವಾಗದೇ ಮದುವೆಗೆ ಆಗಮಿಸಿದ ಎಲ್ಲರಿಗೂ ಸಾವಯವ ಖಾದ್ಯಗಳನ್ನೇ ಬಡಸಿದ್ದು ಮಾಡಿದ್ದು ಮತ್ತೊಂದು ವಿಶೇಷವಾಗಿತ್ತು. ಮದುವೆಗೆ ಬಂದವರಿಗೆ ಉಪಾಹಾರ ಹಾಗೂ ಊಟ ಎಲ್ಲವನ್ನೂ ಸಿರಿ ಧಾನ್ಯಗಳಿಂದಲೇ ತಯಾರಿಸಲಾಗಿತ್ತು.