ಬೆಂಗಳೂರು:- ಮುಡಾ ಪ್ರಕರಣದಲ್ಲಿ ಇಡಿ ಬಹು ಕೋಟಿ ರೂಪಾಯಿ ಮೌಲ್ಯದ ಸೈಟ್ ಗಳ ಮುಟ್ಟುಗೋಲು ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಪ್ರಯಾಗ್ರಾಜ್ನ ಮಹಾ ಕುಂಭಮೇಳದಲ್ಲಿ ಸಿಲಿಂಡರ್ ಸ್ಪೋಟ: ಟೆಂಟ್ಗಳು ಬೆಂಕಿಗಾಹುತಿ!
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇ.ಡಿ.ಯವರು ಮುಟ್ಟುಗೋಲು ವಿಚಾರ ನೋಡಿದ್ದೇನೆ. ಅದರಲ್ಲಿ ಸಿದ್ದರಾಮಯ್ಯ ಪಾತ್ರದ ಬಗ್ಗೆ ಹೇಳಿಲ್ಲ. ಸಿದ್ದರಾಮಯ್ಯ ಅವರ ರಾಜೀನಾಮೆಗೆ ಹಿಂದೆಯೂ ಬಿಜೆಪಿ ಒತ್ತಾಯ ಮಾಡಿದ್ರು. ಈಗಲೂ ಒತ್ತಾಯ ಮಾಡಿದ್ದಾರೆ ಅಷ್ಟೇ, ಇದೇನು ಮೊದಲಲ್ಲ. ದಾಖಲಾತಿ ಇಟ್ಕೊಂಡು ಮಾತಾಡಬೇಕು.
ಇ.ಡಿ ಎಲ್ಲಿಯೂ ಸಿದ್ದರಾಮಯ್ಯ ಇನ್ ಫ್ಲೂಯೆನ್ಸ್ ಮಾಡಿ ಸೈಟ್ ಕೊಡಿಸಿದ್ದಾರೆ ಅಂತಾ ಎಲ್ಲೂ ಹೇಳಿಲ್ಲ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ವಿರೋಧ ಪಕ್ಷಗಳ ಆರೋಪ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ದರೋಡೆ ಇವೆಲ್ಲಾ ಆಗೋದು ಗೊತ್ತಾದ್ರೆ ತಡಿಯಬಹುದು. ಅಲ್ಲಿ ಆರ್ಮ್ಸ್ ಗಾರ್ಡ್ ಇರಲಿಲ್ಲ. ಸೆಕ್ಯೂರಿಟಿ ಇರಲಿಲ್ಲ.ಇದನ್ನೂ
ನೋಡಬೇಕಾಗುತ್ತದೆ. ಸಂದರ್ಭ ಬಂದಾಗ ನಾನು ಅಂಕಿ-ಅಂಶ ಕೊಡ್ತೇನೆ. ಬಿಜೆಪಿಯವರ ಆಡಳಿತ ಅವಧಿಯಲ್ಲಿ ಎಷ್ಟು ರೇಪ್, ದರೋಡೆ ಆಗಿವೆ ಅಂತ. ವಿರೋಧ ಪಕ್ಷದವರ ಆರೋಪಗಳಿಗೆ ಗೃಹ ಸಚಿವ ತಿರುಗೇಟು ಕೊಟ್ಟಿದ್ದಾರೆ.