ಉತ್ತರ ಪ್ರದೇಶ:- ಪ್ರಯಾಗ್ರಾಜ್ನ ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸಿಲಿಂಡರ್ಗಳು ಸ್ಫೋಟಗೊಂಡು 25ಕ್ಕೂ ಹೆಚ್ಚು ಟೆಂಟ್ ಗಳು ಹೊತ್ತಿ ಉರಿದಿರುವ ಘಟನೆ ಜರುಗಿದೆ.
ಒಲಿಂಪಿಕ್ಸ್ ಪದಕ ವಿಜೇತೆ ಮನುಭಾಕರ್ ಗೆ ಆಘಾತ: ರಸ್ತೆ ಅಪಘಾತದಲ್ಲಿ ಅಜ್ಜಿ, ಚಿಕ್ಕಪ್ಪ ಸಾವು!
ಸದ್ಯ ಯಾವುದೇ ಸಾವು ನೋವು ಸಂಭವಿಸಿಲ್ಲ. ವಿವೇಕಾನಂದ ಸೇವಾ ಸಮಿತಿಗೆ ಸೇರಿದ 25ಕ್ಕೂ ಹೆಚ್ಚು ಟೆಂಟ್ಗಳಿಗೆ ಬೆಂಕಿ ಹತ್ತಿಕೊಂಡಿದೆ. ಟೆಂಟ್ಗಳಲ್ಲಿ ಇಟ್ಟಿದ್ದ ಸಿಲಿಂಡರ್ಗಳು ಒಂದೊಂದಾಗಿ ಸ್ಫೋಟಗೊಳ್ಳುತ್ತಿರುವುದರಿಂದ ಬೆಂಕಿ ತೀವ್ರತೆ ಹೆಚ್ಚಾಗುತ್ತಿದೆ. ಬೆಂಕಿ ಅವಘಡದಿಂದಾಗಿ ಮಹಾ ಕುಂಭಮೇಳ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಟೆಂಟ್ನಲ್ಲಿ ಇರುವವರನ್ನು ಅಧಿಕಾರಿಗಳು ದೂರ ಕಳಿಸುತ್ತಿದ್ದಾರೆ.
ಸದ್ಯ ಸ್ಥಳಕ್ಕಾಗಮಿಸಿದ 50ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ಆರಂಭವಾಗಿದೆ.