ನವದೆಹಲಿ:- ಕೇಂದ್ರ ಬಜೆಟ್ ಫೆಬ್ರವರಿ 1 ರಂದು ಮಂಡನೆ ಆಗಲಿದೆ. 2025ರ ಫೆಬ್ರುವರಿ 1ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ನಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ಸಿಗಬಹುದು. ಹಿಂದಿನ ಕೆಲ ಬಜೆಟ್ಗಳಲ್ಲಿ ಮಹಿಳಾ ಮುಖಿ ಯೋಜನೆಗಳಿಗೆ ಒತ್ತು ಕೊಡಲಾಗಿತ್ತು
8 ಮರಿಗಳಿಗೆ ಜನ್ಮ ನೀಡಿದ ತೋಳ : ಮರಿಗಳ ರಕ್ಷಣೆಗೆ ಕ್ರಮವಹಿಸಿದ ಅರಣ್ಯ ಇಲಾಖೆ
2019ರಲ್ಲಿ ಚಲಾವಣೆಯಾಗಿದ್ದ ಮಹಿಳಾ ಮತಗಳ ಸಂಖ್ಯೆಗಿಂತ 2024ರ ಚುನಾವಣೆಯಲ್ಲಿ 1.8 ಕೋಟಿ ಹೆಚ್ಚು ಮತ ಚಲಾವಣೆ ಆಗಿದೆ. ಇನ್ಕಮ್ ಟ್ರಾನ್ಸ್ಫರ್ ಸ್ಕೀಮ್ಗಳು, ಮುದ್ರಾ ಯೋಜನೆಯಡಿ ಸಿಗುತ್ತಿರುವ ಸಾಲ, ಪಿಎಂ ಆವಾಸ್ ಯೋಜನೆ ಅಡಿ ಮನೆಗಳು ಸಿಗುತ್ತಿರುವುದು, ನೈರ್ಮಲ್ಯೀಕರಣ ಯೋಜನೆಗಳು, ಸಾಕ್ಷರತಾ ಸ್ಕೀಮ್ಗಳು ಇವೇ ಮುಂತಾದ ಪ್ರಯತ್ನಗಳು ಮಹಿಳೆಯರಿಗೆ ಬಲ ನೀಡಿವೆ ಎಂದು ಈ ಎಸ್ಬಿಐನ ವರದಿ ಹೇಳುತ್ತದೆ.
ಮಹಿಳೆಯರನ್ನು ಗುರಿಯಾಗಿಸಿ ನಡೆಸಲಾದ ಸಾಕ್ಷರತೆ, ಉದ್ಯೋಗ, ವಸತಿ, ನೈರ್ಮಲ್ಯ ಯೋಜನೆಗಳನ್ನು ಅಳವಡಿಸಿದ ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆ 1.5 ಕೋಟಿಯಷ್ಟು ಹೆಚ್ಚಾಗಿದೆ. ಈ ಯೋಜನೆಗಳನ್ನು ಜಾರಿಗೊಳಿಸದ ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದ್ದು 30 ಲಕ್ಷ ಮಾತ್ರ.
2024ರ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ಮಹಿಳೆ ಮತ್ತು ಬಾಲಕಿಯರಿಗೆ ಅನುಕೂಲವಾಗುವ ವಿವಿಧ ಯೋಜನೆಗಳಿಗೆ ಬರೋಬ್ಬರಿ ಮೂರು ಲಕ್ಷ ರುಪಾಯಿಯನ್ನು ನೀಡಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಬಜೆಟ್ ಶೇ. 3ರಷ್ಟು ಹೆಚ್ಚಾಗಿ 26,092 ಕೋಟಿ ರೂ ಮುಟ್ಟಿತ್ತು.
ಮಿಷನ್ ಶಕ್ತಿ, ಸಂಬಾಳ್, ಸಾಮರ್ಥ್ಯ ಇತ್ಯಾದಿ ಮಹಿಳಾ ಮುಖಿ ಯೋಜನೆಗಳಿಗೆ ಸರ್ಕಾರದ ಧನಸಹಾಯ ಹೆಚ್ಚಾಗಿದೆ. ಕೆಲಸ ಮಾಡುವ ಮಹಿಳೆಯರಿಗೆಂದು ಇರುವ ಹಾಸ್ಟೆಲ್ಗಳಲ್ಲಿ ಹೆಚ್ಚಿನ ಸುರಕ್ಷತೆ ವಹಿಸಲಾಗಿದೆ. ಮಹಿಳೆಯರನ್ನು ಕೆಲಸಕ್ಕೆ ಸೇರಲು ಉತ್ತೇಜಿಸುವ ಕಾರ್ಯ, ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ಹೆಚ್ಚಿಸುವ ಕಾರ್ಯಗಳಿಗೆ ಬಜೆಟ್ನಲ್ಲಿ ಗಮನ ಕೊಡಲಾಗಿತ್ತು.
ಅದರಂತೆ ಈ ಬಾರಿಯೂ ಮಹಿಳೆಯರಿಗೆ ಹೆಚ್ಚು ಒತ್ತು ನೀಡಲಾಗುತ್ತದೆ.