ಚಾಮರಾಜನಗರ: ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಬದಲಾಗ್ತಾರ ಎಂಬ ಪ್ರಶ್ನೆಗೆ ನೇರವಾಗೆ ಉತ್ತರಿಸಿ, ನಿಮ್ಗೆ ಗೊತ್ತಾಗ್ತ ಇಲ್ವಾ ಈಗ..? ಕುರ್ಚಿ ಖಾಲಿ ಆಗಿದ್ಯಾ..? ಅವರ ನಾಯಕತ್ವದಲ್ಲೇ ನಾವು ಮುಂದುವರೆಯುತ್ತೇವೆ. ಐದು ವರ್ಷನೂ ಸಿದ್ದರಾಮಯ್ಯವರೇ ಸಿ.ಎಂ. ಆದರೆ ಸಿ.ಎಂ ಸೀಟು ಖಾಲಿ ಇಲ್ಲ. ಅವರ ನಾಯಕತ್ವದಲ್ಲೇ ಮುಂದಿನ ಐದು ವರ್ಷ ಮುಂದುವರೆಯುತ್ತೇವೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರೇ ಮುಂದಿನ ಐದು ವರ್ಷ ಮುಂದುವರೆಯಲ್ಲಿದ್ದಾರೆಂದು ಮಾರ್ಮಿಕವಾಗಿ ನುಡಿದರು.
ಮತ್ತೆ ಹಿರಿಯರು ನನಗೆ ಅವಕಾಶ ಕೊಡ್ತಾರೆ ; ಜಾರಕಿಹೊಳಿ, ಯತ್ನಾಳ್ಗೆ ವಿಜಯೇಂದ್ರ ತಿರುಗೇಟು