ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಅತ್ಯಂತ ಮಹತ್ವದ ಸ್ಥಾನ ನೀಡಲಾಗಿದೆ. ಆದರೆ ಬದಲಾಗುತ್ತಿರುವ ಸಾಮಾಜಿಕ ಮತ್ತು ವೈಯಕ್ತಿಕ ಮನಸ್ಥಿತಿಗಳಿಂದಾಗಿ ಇದರಲ್ಲೂ ಬದಲಾವಣೆಗಳು ಕಾಣಲಾರಂಭಿಸಿವೆ. ಅಷ್ಟೇ ಅಲ್ಲ, ಮದುವೆಯ ಪರಿಕಲ್ಪನೆಯೇ ಹಲವೆಡೆ ಬದಲಾಗುತ್ತಿದೆ.
10TH, PUC ಪಾಸಾಗಿದ್ಯಾ!? ನಿಮಗಿದೆ ಇಲ್ಲಿ ಭರ್ಜರಿ ಉದ್ಯೋಗ, ಇಲ್ಲಿ ಈಗಲೇ ಅಪ್ಲೈ ಮಾಡಿ!
ಇಂದಿನ ಕಾಲದಲ್ಲಿ ಯುವ ಪೀಳಿಗೆ ಹೆಚ್ಚಾಗಿ ಒಂಟಿಯಾಗಿರಲು ಇಚ್ಛಿಸುತ್ತಾರೆ. ಈಗಿನ ಜನರೇಷನ್ ಅವರಿಗೆ ಹೊಂದಾಣಿಕೆ ಗುಣಗಳು ಕಡಿಮೆ. ಆದ್ದರಿಂದ ಯುವಕರು ಮದುವೆ ಎಂದರೆ ದೂರ ಸರಿಯುತ್ತಾರೆ. ಮದುವೆ ಬಳಿಕ ನಮ್ಮ ಜೀವನ ಹಾಳಾಗುತ್ತೆ, ನಾವು ಅಂದುಕೊಂಡಂತೆ ಯಾವುದೂ ನಡೆಯಲ್ಲ. ನಮ್ಮ ಆಸೆಗಳೆಲ್ಲ ಮೂಲೆ ಗುಂಪಾಗುತ್ತೆ. ಖುಷಿಯಿಂದ ಇರಲಾಗಲ್ಲ ಎಂದು ಯೋಚಿಸುತ್ತಾರೆ.
ಪರಸ್ಪರ ಚಿಯರ್ ಲೀಡರ್ ಆಗಿರಿ
ಕೆಲಸದಲ್ಲಿ ಪರಸ್ಪರ ಬೆಂಬಲಿಸಿ ಮತ್ತು ಒಬ್ಬರಿಗೊಬ್ಬರು ಸಲಗೆ ನೀಡಿ. ಉತ್ತಮ ಕೇಳುಗರಾಗಿ ಮತ್ತು ಉತ್ತಮ ಮಾತುಗಾರರಾಗಿ. ಅಂದರೆ, ಬೇಸರದ ಸಮಯದಲ್ಲೂ, ಸಂತೋಷದ ಸಮಯದಲ್ಲೂ ಒಬ್ಬರಿಗೊಬ್ಬರು ಸಾಥ್ ನೀಡಿ, ಚಿಯರ್ ಲೀಡರ್ ಆಗಿ.
ಬೇಗ ಕ್ಷಮಿಸಿ
ನಿಮ್ಮ ಸಂಗಾತಿ ಜೊತೆ ಸಂಬಂಧದಲ್ಲಿ ಕಹಿ ಅಥವಾ ಭಿನ್ನಾಭಿಪ್ರಾಯ ಉಂಟಾದಾಗ, ಅದನ್ನು ತುಂಬಾ ದಿನಗಳವರೆಗೆ ಮುಂದುವರೆಸಿಕೊಂಡು ಹೋಗಬೇಡಿ. ಬದಲಾಗಿ ಅವತ್ತೇ ಮರೆತುಬಿಡಿ, ಇಬ್ಬರು ಮತ್ತೆ ಒಂದಾಗಿ, ಬೇಗನೆ ಒಬ್ಬರನ್ನೊಬ್ಬರು ಕ್ಷಮಿಸಿ.
ಸಮಯ ಏನೇ ಇರಲಿ ಬದ್ಧರಾಗಿರಿ
ಜೀವನದಲ್ಲಿ ಏರಿಳಿತಗಳು ಬರೋದು ಸಾಮಾನ್ಯ. ವೈವಾಹಿಕ ಜೀವನದಲ್ಲೂ ಇಂತಹ ಸಮಸ್ಯೆಗಳು ಬರೋದು ಸರ್ವೇ ಸಾಮಾನ್ಯ. ಇದರ ಹೊರತಾಗಿಯೂ, ನಿಮ್ಮ ಸಂಬಂಧದಲ್ಲಿ ನೀವು ಬದ್ಧರಾಗಿರೋದು, ಜೀವನದ ಪರೀಕ್ಷೆಯಲ್ಲಿ ಗೆಲ್ಲೋದಕ್ಕೆ ಸಾಧ್ಯವಾಗುತ್ತೆ.
ಹಣಕಾಸಿನ ಬಗ್ಗೆ ಮುಕ್ತವಾಗಿ ಮಾತನಾಡಿ
ನಿಮ್ಮ ಮನೆ ಮತ್ತು ಸಂಬಂಧವು ನಿಮ್ಮದೇ ಆಗಿದೆ. ಉಳಿದ ವಿಷ್ಯಗಳನ್ನು ಮನಸ್ಸು ಬಿಚ್ಚಿ ಮಾತನಾಡುವಂತೆ, ಸಂಗಾತಿ ಜೊತೆ ಹಣದ ಬಗ್ಗೆ ಮುಕ್ತವಾಗಿ ಮಾತನಾಡಿ. ಉಳಿತಾಯ, ಹೂಡಿಕೆ, ಖರ್ಚು ಇವೆಲ್ಲವುಗಳ ಬಗ್ಗೆ ಮಾತನಾಡಿದರೆ, ಇದು ಅನಗತ್ಯ ಒತ್ತಡದಿಂದ ಸಂಬಂಧವನ್ನು ಉಳಿಸುತ್ತದೆ
ಸ್ಪಾರ್ಕ್ ಯಾವಾಗಲೂ ಇರಲಿ
ಮದುವೆಯೊಂದಿಗೆ ಬರುವ ಜವಾಬ್ದಾರಿಗಳು ನಿಮ್ಮ ನಡುವಿನ ಕಿಡಿಯನ್ನು ಕಡಿಮೆ ಮಾಡಲು ಬಿಡಬೇಡಿ. ಆವಾಗವಾಗ ಸಣ್ಣ ಸಣ್ಣ ಸರ್ಪ್ರೈಸ್ ಗಳನ್ನು ನೀಡೋದನ್ನು ಮರಿಬೇಡಿ. ಜೊತೆಗೆ ಕಿಸ್, ಡೇಟ್ ನೈಟ್ ಸಣ್ಣ ಟ್ರಿಪ್ ಇದೆಲ್ಲವೂ ಇರಲಿ.
ಜೋಕ್ಸ್ ಮಾಡಿ ನಗಿ
ಸಂಬಂಧ ಗಟ್ಟಿಯಾಗಿರಬೇಕು ಅಂದ್ರೆ ಅದರಲ್ಲಿ ನಗುವಿಗೂ ಜಾಗಬೇಕು. ಹಾಗಾಗಿ ಒಬ್ಬರನ್ನೊಬ್ಬರು ಕಾಲೆಳೆಯಿರಿ, ಜೋಕ್ಸ್ ಮಾಡಿ ನಗಿ, ಇದರಿಂದ ಜೀವನ ತುಂಬಾನೆ ಖುಷಿಯಾಗಿರುತ್ತೆ.
ನೋಯಿಸಬೇಡಿ
ಒಬ್ಬರನ್ನೊಬ್ಬರು ಅವಮಾನಿಸಬೇಡಿ. ಮಾತನಾಡುವಾಗ ಯಾವಾಗಲೂ ನಿಮ್ಮ ಭಾಷೆಯನ್ನು ಸಭ್ಯವಾಗಿ ಮತ್ತು ಗೌರವಯುತವಾಗಿರಿಸಿಕೊಳ್ಳಿ. ಸಂಬಂಧದಲ್ಲಿ ಇದು ತುಂಬಾನೆ ಮುಖ್ಯ. ಒಬ್ಬರನ್ನು ನೋಯಿಸಿದ್ರೆ, ಅವಮಾನ ಮಾಡಿದ್ರೆ ಸಂಬಂಧ ಹಳಸಿ ಹೋಗಬಹುದು. ಹಾಗಾಗಿ ಈ ರೀತಿ ಆಗದಂತೆ ತಡೆಯಿರಿ.
ಕೋಪದಲ್ಲಿ ಮಲಗಬೇಡಿ
ಜಗಳವಾಡಿದ ನಂತರ ಅಥವಾ ಪರಸ್ಪರ ವಾದಿಸಿದ ನಂತರ ಕೋಪದಲ್ಲಿ ಎಂದಿಗೂ ಮಲಗಬೇಡಿ. ವಿಷಯಗಳನ್ನು ಆರಾಮವಾಗಿ ಕೂತು ಚರ್ಚಿಸಿ, ಬಳಿಕ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಸಾರಿ ಕೇಳಿ ಮಲಗಿ, ಇದರಿಂದ ಸಂಬಂಧ ಚೆನ್ನಾಗಿರುತ್ತೆ.