ಧಾರವಾಡ : ನಕಲಿ ಕಾಂಗ್ರೆಸ್ಸಿನ ನಕಲಿ ಗಾಂಧಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಸಮಾವೇಶ ಇದು ಕೇಂದ್ರ ಸಚಿವ ಪ್ರಹಾದ್ಲ್ ಜೋಶಿ ಆರೋಪಿಸಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ಕೇಜ್ರಿವಾಲ್ ಅವರಿಗೆ ಮಾತಾಡಲಿಕ್ಕೆ ಕೊಡಲಿಲ್ಲ. ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ವಿಸರ್ಜನೆ ಮಾಡಲು ಹೇಳಿದ್ರು. ಅವರು ಹೇಳಿದಂತ ಕಾಂಗ್ರೆಸ್ ಪಕ್ಷನೇ ಇವತ್ತು ಅಸ್ತಿತ್ವಕ್ಕೆ ಇಲ್ಲಾ. ಈ ಕಾಂಗ್ರೆಸ್ ಪಕ್ಷದ್ದು ಎ ದಿಂದ ಝಡ್ವರೆಗೆ ಮುಗಿದು ಹೋಗಿದೆ ಕಥೆ. ಇದು ಒರಿಜಿನಲ್ ಕಾಂಗ್ರೆಸ್ ಅಲ್ಲಾ, ಡುಪ್ಲಿಕೆಟ್ ಕಾಂಗ್ರೆಸ್. ಅದಕ್ಕೆ ಸರ್ಕಾರದ ದುಡ್ಡನ್ನ ಪೋಲು ಮಾಡ್ತಾರೆ. ನಮ್ಮಲ್ಲಿ ಯಾರದೋ ದುಡ್ಡು ಎಲ್ಲಮ್ಮ ಜಾತ್ರೆ ಅಂತಾ ಗಾದೆ ಮಾತಿದೆ ಸರ್ಕಾರದ ದುಡ್ಡಲ್ಲಿ ಜಾತ್ರೆ ಮಾಡ್ತಾ ಹೊರಟಿದ್ದಾರೆ. ರಾಹುಲ್ ಗಾಂಧಿ, ಈಗಿನ ಕಾಂಗ್ರೆಸ್ ನವರು, ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಇವರು ದೇಶದಲ್ಲಿ ಅಸ್ತಿತ್ವದಲ್ಲೇ ಇಲ್ಲಾ. ಯಾವುದೋ ಎರಡು ರಾಜ್ಯದಲ್ಲಿ ಟುಕುಮುಕು ಜೀವ ಇಟ್ಕೊಂಡು ಕುತಿದಾರೆ ಎಂದರು.
ಇನ್ನೂ, ಕಾಂಗ್ರೆಸ್ ಪಕ್ಷದ ಚಿಲ್ಲರೆ ರಾಜಕಾರಣ ಮಾಡುತ್ತಿದೆ, ಸ್ವಾಮೀತ್ವ ಭಾರತ ಸರ್ಕಾರದ ಯೋಜನೆ ಇದನ್ನ ಆರಂಭ ಮಾಡಿದ್ದೇ ನಾವು. ಮೋದಿ ಅವರು ಬರುವ ಮೊದಲೇ ಹಳ್ಳಿಯಲ್ಲಿ ವಾಸ ಮಾಡುವ ಜನರ ಮನೆ ಸುತ್ತಮುತ್ತ ವಾತಾವರಣ ಬಗ್ಗೆ ಇವರಿಗೆ ಲಕ್ಷನೇ ಇರಲಿಲ್ಲ. ೬೦ ವರ್ಷದ ಆಡಳಿತ ಮಾಡಿದ್ರು, ಸ್ವಾಮೀತ್ವ ಯೋಜನೆ ಎಂದರೆ ರಸ್ತೆ ಬದಿ ವ್ಯಾಪಾರ ಮಾಡುವವರ, ಹಳ್ಳಿಯಲ್ಲಿ ರೈತರ ಜಾಗ ಬಿಟ್ಟು ಉಳಿದಿದ್ದಕ್ಕೆ ಗುರುತು ಕೊಡುವದು ಯೋಜನೆ ಇದು ಇದಾಗಿದ್ದೇ ಮೋದಿ ಕಾಲದಲ್ಲಿ, ಇವರು ಮೋದಿ ಪೋಟೊನೂ ಹಾಕಲ್ಲಾ, ಅವರ ಹೆಸರು ಹೇಳಲ್ಲ, ನಮಗೂ ಹೇಳಲ್ಲಅಧಿಕಾರಿಗಳು ಸಹಿತ ಹೇಗೆ ವರ್ತನೆ ಮಾಡ್ತಾರೆ ಎನ್ನುವುದು ಗೊತ್ತಾಗುತ್ತದೆ ಎಂದರು.