ಹೈದರಾಬಾದ್ ಮೆಟ್ರೋದಲ್ಲಿ ಹೃದಯ ರವಾನೆ ಮಾಡಲಾಗಿದ್ದು, ಕನ್ನಡಿಗ ವೈದ್ಯನ ನೇತೃತ್ವ ವಹಿಸಲಾಗಿದೆ.
ಜನವರಿ 17 ರಂದು ಸಂಜೆ ಕಾರಿಡಾರ್ ಅನ್ನು ರಚಿಸಲಾಗಿದ್ದು, ಎಲ್ಬಿ ನಗರದ ಕಾಮಿನೇನಿ ಆಸ್ಪತ್ರೆಯಿಂದ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ದಾನಿಗಳ ಹೃದಯವನ್ನು ಸಾಗಿಸಲು ಅನುಕೂಲವಾಯಿತು, ಈ ಜೀವ ಉಳಿಸುವ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಸಮಯವನ್ನು ಉಳಿಸಲಾಗಿದೆ ಎಂದು ಹೈದರಾಬಾದ್ ಮೆಟ್ರೋ ರೈಲಿನ ಪ್ರಕಟಣೆ ತಿಳಿಸಿದೆ.
ಧಾರವಾಡ ಮೂಲದ ವೈದ್ಯ ಅಜಯ್ ಎಂಬುವವರು ಹೃದಯ ಸಾಗಿಸುವ ಕಾರ್ಯಾಚರಣೆಯ ಪ್ರಮುಖ ಭಾಗವಾಗಿದ್ದರು. ಅಪಘಾತದಲ್ಲಿ ಗಾಯಗೊಂಡಿದ್ದ 35 ವರ್ಷದ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ಕುಟುಂಬ ಮುಂದಾಗಿತ್ತು. ಈ ವೇಳೆ ಗ್ಲೆನ್ ಗೆಲ್ಸ್ ಗ್ಲೋಬಲ್ ಆಸ್ಪತ್ರೆಯ ರೋಗಿಯೊಬ್ಬರಿಗೆ ಹೃದಯ ಬೇಕಿತ್ತು. ಹೃದಯ ಮತ್ತು ಶ್ವಾಸಕೋಶ ಕಸಿ ತಜ್ಞರಾಗಿರೋ ಡಾ. ಅಜಯ ಜೋಶಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.