ಚಾಮರಾಜನಗರ : ಸಫಾರಿ ವೇಳೆ ಪ್ರವಾಸಿಗರ ಮೇಲೆ ಒಂಟಿ ಸಲಗವೊಂದು ಪ್ರವಾಸಿಗರ ಮೇಲೆ ದಾಳಿ ನಡೆಸಲು ಮುಂದಾದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ಅರಣ್ಯ ಪ್ರದೇಶದ ಅಜ್ಜೀಪುರ ಸಫಾರಿ ಕೇಂದ್ರದಲ್ಲಿ ಸಫಾರಿಗೆ ತೆರಳಿದ್ದ ವೇಳೆಯಲ್ಲಿ ಒಂಟಿ ಸಲಗವೊಂದು ಪ್ರವಾಸಿಗರ ಮೇಲೆ ದಾಳಿ ನಡೆಸಲು ಮುಂದಾಗಿದೆ.
ರೈಲ್ವೇ ಗೇಟ್ನಲ್ಲಿ ಸಿಲುಕಿಕೊಂಡು ಕಾಡಾನೆ ಪರದಾಟ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಹನೂರು ತಾಲೂಕಿನ ಅಜ್ಜೀಪುರ ಸಫಾರಿ ಕೇಂದ್ರದ ಉಡುತೊರೆಹಳ್ಳ ಜಲಾಶಯದ ಬಳಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಒಂಟಿ ಸಲಗ ಕಾಣಿಸಿಕೊಂಡಿದೆ. ಈ ವೇಳೆ ಖುಷಿಯಿಂದ ಪ್ರವಾಸಿಗರು ಫೋಟೋ ಕ್ಲಿಕ್ಕಿಸುತ್ತಿದ್ದರು. ಈ ವೇಳೆ ಜೀಪಿನ ಹಿಂದೇನೆ ರಾಜ ಗಾಂಭೀರ್ಯದಿಂದ ಸಾಗುತ್ತಿದ್ದ ಒಂಟಿ ಸಲಗ ಏಕಾಏಕಿ ಪ್ರವಾಸಿಗರ ಮೇಲೆ ದಾಳಿ ನಡೆಸಲು ಮುಂದಾಗಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ವಾಹನದ ಚಾಲಕನ ಸಮಯ ಪ್ರಜ್ಞೆಯಿಂದ ಮುಂದಾಗಬಹುದಿದ್ದ ಅಪಾಯ ತಪ್ಪಿದಂತಾಗಿದೆ.