ಸಾಮಾನ್ಯವಾಗಿ ನೀವು ಅನೇಕ ಜನರು ತಮ್ಮ ಜೇಬಿನಲ್ಲಿ ಕೈ ಹಾಕಿಕೊಂಡು ತಿರುಗಾಡುವುದನ್ನು ನೋಡುತ್ತೀರಿ.
ಇದು ಕೇವಲ ಸರಳ ವಿಷಯವಲ್ಲ.. ಇದರ ಹಿಂದೆ ಹಲವು ಅರ್ಥಗಳಿವೆ ಎನ್ನುತ್ತಾರೆ ಮನೋವಿಜ್ಞಾನಿಗಳು… ನಾವು ಇಂದು ಈ ಕುರಿತಾಗಿ ನಿಮಗೆ ತಿಳಿಸಿ ಕೊಡಲಿದ್ದೇವೆ…
ಕರ್ನಾಟಕದ ಈ ಜಿಲ್ಲೆಗಳಲ್ಲಿ ಎರಡು ದಿನ ಭಾರೀ ಮಳೆ ಸಾಧ್ಯತೆ: ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದಲೇ ಮಳೆ!
ಒಬ್ಬ ವ್ಯಕ್ತಿಯು ತನ್ನ ಜೇಬಿನಲ್ಲಿ ತನ್ನ ಕೈಗಳನ್ನು ಇಟ್ಟುಕೊಂಡು ನಡೆದರೆ, ಅವನು ವಿಚಲಿತನಾಗದೆ ತುಂಬಾ ಎಚ್ಚರವಾಗಿರುತ್ತಾನೆ ಎಂದರ್ಥ. ಈ ಗೆಸ್ಟರ್ ವಿಶೇಷವಾಗಿ ವ್ಯಕ್ತಿಯು ಸಾಮಾಜಿಕವಾಗಿ ಅಸುರಕ್ಷಿತತೆಯನ್ನು ಅನುಭವಿಸಿದಾಗ ಮತ್ತು ಈ ರೀತಿಯಲ್ಲಿ ತನ್ನ ಕೈಗಳನ್ನು ಮರೆಮಾಡುತ್ತದೆ. ಹೀಗೆ ಮಾಡುವುದರಿಂದ ಭದ್ರತೆಯ ಭಾವ ಮೂಡುತ್ತದೆ ಎಂದರ್ಥ.
ವ್ಯಕ್ತಿ ತನ್ನ ಜೇಬಿನಲ್ಲಿ ಕೈಗಳನ್ನು ಇಟ್ಟುಕೊಂಡು ನಡೆಯಲು ಸಾಮಾನ್ಯ ಕಾರಣವೆಂದರೆ ಆರಾಮ ಅಥವಾ ಯಾವುದೇ ರೀತಿಯ ಕಿರಿಕಿರಿ ಇಲ್ಲದೆ ನಿರಾಳತೆಯನ್ನು ಹುಡುಕುವುದಾಗಿದೆ. ಈ ಸನ್ನೆಯು ಸ್ವಯಂ ಹಿತಕ್ಕಾಗಿ, ಅದರಲ್ಲಿಯೂ ವಿಶೇಷವಾಗಿ ಆ ವ್ಯಕ್ತಿ ಸಾಮಾಜಿಕವಾಗಿ ಆತಂಕ ಅಥವಾ ಅಸುರಕ್ಷಿತ ಭಾವನೆಯನ್ನು ಅನುಭವಿಸಿದಾಗ, ಕೈಗಳನ್ನು ಮರೆಮಾಡುತ್ತಾನೆ. ಈ ರೀತಿ ಮಾಡುವುದು ಒಂದು ರೀತಿಯ ಸುರಕ್ಷತೆಯ ಭಾವನೆಯನ್ನು ಮೂಡಿಸುತ್ತದೆ. ಅಂದರೆ ಮಾನಸಿಕವಾಗಿ, ಇದು ಉದ್ವೇಗವನ್ನು ಕಡಿಮೆ ಮಾಡಿ ತನ್ನನ್ನು ತಾನು ಶಾಂತಗೊಳಿಸಿಕೊಳ್ಳುವ ಒಂದು ಪ್ರಯತ್ನವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕೆಲವು ಸಂದರ್ಭಗಳಲ್ಲಿ, ಇದು ನಿರಾಸಕ್ತಿ ಅಥವಾ ನಿಷ್ಕ್ರಿಯತೆಯನ್ನು ಸಹ ಹೇಳುವುದಾಗಿರಬಹುದು. ಈ ಭಂಗಿ ಪರಸ್ಪರ ಅಂದರೆ ವ್ಯಕ್ತಿಯಿಂದ ಮತ್ತೊಂದು ವ್ಯಕ್ತಿ ಮಧ್ಯದಲ್ಲಿ ನಡೆಯುವ ಕ್ರಿಯೆಯನ್ನು ತಪ್ಪಿಸುವ ಬಯಕೆಯೂ ಆಗಿರಬಹುದು. ಉದಾಹರಣೆಗೆ, ಜೇಬಿನಲ್ಲಿ ಕೈಗಳನ್ನು ಇಟ್ಟುಕೊಂಡು ಜನದಟ್ಟಣೆಯ ಪ್ರದೇಶದಲ್ಲಿ ನಡೆಯುವುದು. ಇದು ವ್ಯಕ್ತಿಯು, ಯಾವುದರಲ್ಲಿಯೂ ತೊಡಗಿಸಿಕೊಳ್ಳಲು ಬಯಸುತ್ತಿಲ್ಲ ಅಥವಾ ಅಂತಹ ವಿಷಯಗಳಲ್ಲಿ ನಿರಾಸಕ್ತಿ ತೋರಿಸುತ್ತಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಕೆಲವೊಮ್ಮೆ ಈ ಭಂಗಿ ಒಬ್ಬ ವ್ಯಕ್ತಿ ತನ್ನ ವೈಯಕ್ತಿಕ ಗಡಿಗಳನ್ನು ಕಾಪಾಡಿಕೊಳ್ಳಲು ಕೂಡ ಸಹಾಯ ಮಾಡುತ್ತದೆ.
ಆದರೆ ಜೇಬಿನಲ್ಲಿ ಕೈ ಇಟ್ಟುಕೊಳ್ಳುವುದು ಯಾವಾಗಲೂ ಅಭದ್ರತೆಯನ್ನು ಸೂಚಿಸುವುದಿಲ್ಲ. ಕೆಲವರು ಇದನ್ನು ಆತ್ಮವಿಶ್ವಾಸ ಪ್ರದರ್ಶಿಸಲು ಕೂಡ ಬಳಸುತ್ತಾರೆ, ವಿಶೇಷವಾಗಿ ನೇರ ಭಂಗಿ ಮತ್ತು ಕಣ್ಣಿನ ಸಂಪರ್ಕದಲ್ಲಿ ಯಾವುದೇ ರೀತಿಯ ಭಯವಿಲ್ಲದೆ ನಡೆಯುವುದು ಒಂದು ರೀತಿಯ ನಿರಾಳ ನಡವಳಿಕೆಯನ್ನು ತೋರಿಸುತ್ತದೆ. ಕೆಲವೊಮ್ಮೆ ಇದೊಂದು ರೀತಿಯ ಗತ್ತಿನ ನಡಿಗೆಯೂ ಆಗಿರಬಹುದು. ಹೀಗೆ ಬೇರೆ ಬೇರೆ ರೀತಿಯ ನಡಿಗೆಗಳಿಗೆ ನಾನಾ ಅರ್ಥಗಳಿರುತ್ತವೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಸನ್ನೆಗಳು ಸರಿಯಾಗಿ ತಿಳಿಯುತ್ತದೆ.