ಬೀದರ್: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದ ಇಬ್ಬರು ಆರೋಪಿಗಳಿಗೂ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳಾದ ಮಹಾರಾಷ್ಟ್ರದ ರೌಡಿಶೀಟರ್ ಪ್ರತಾಪ್ ಧೀರ್ ಪಾಟೀಲ್ ಮತ್ತು ಸೊಲ್ಲಾಪುರ ಜಿಲ್ಲಾ ಶಿವಸೇನೆ ಅಧ್ಯಕ್ಷ ಮನೋಜ್ ಸೇಜವಾಲ್ಗೆ ಜೆಎಂಎಫ್ಸಿ ಕೋರ್ಟ್ನಿಂದ ನಿರೀಕ್ಷಣಾ ಜಾಮೀನು ನೀಡಿದೆ.
ಗುತ್ತಿಗೆದಾರ ಸಚಿನ್ ಸೂಸೈಡ್ ಕೇಸ್ : ಪ್ರಿಯಾಂಕ್ ಖರ್ಗೆ ಆಪ್ತ ಸೇರಿ ಐವರು ಅರೆಸ್ಟ್!
ಸದ್ಯ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಆಪ್ತ, ಕಲಬುರಗಿ ಪಾಲಿಕೆ ಮಾಜಿ ಸದಸ್ಯ ರಾಜು ಕಪನೂರ್ ಸೇರಿ ಐವರು ಬೀದರ್ನ ಜೈಲು ಸೇರಿದ್ದಾರೆ. ಸಿಐಡಿ ತಂಡವು ಕಪನೂರ್ , ಕಲಬುರಗಿ ಕಾಂಗ್ರೆಸ್ ಮುಖಂಡ ನಂದಕುಮಾರ ನಾಗಭುಜಂಗೆ, ಕಲಬುರಗಿ ಜಿಪಂ ಮಾಜಿ ಉಪಾಧ್ಯಕ್ಷ ಗೋರಖನಾಥ್ ಸಜ್ಜನ್, ಆರ್.ಕೆ.ಪಾಟೀಲ್ ಹಾಗೂ ಸತೀಶ ರತ್ನಾಕರ್ ದುಬಲಗುಂಡಿ ಅವರನ್ನು ಸಿಐಡಿ ತಂಡ ಎಂಟು ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದುಕೊಂಡು ತೀವ್ರ ವಿಚಾರಣೆ ಮಾಡಿತ್ತು. ಸದ್ಯ ಸಿಐಡಿ ವಿಚಾರಣೆ ಪೂರ್ಣಗೊಂಡಿದ್ದು, ಎಲ್ಲಾ ಐದು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಬೀದರ್ ಜೆಎಂಎಫ್ಸಿ ಕೋರ್ಟ್ ಜಡ್ಜ್ ರಾಮಮೂರ್ತಿ ಎನ್ ಆದೇಶ ನೀಡಿದ್ದಾರೆ. ಕಳೆದ ಡಿ.26ರಂದು ಸಚಿನ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.