ಕೊಡಗು: ಗೇಟ್ ನಲ್ಲಿ ಸಿಲುಕಿಕೊಂಡ ತನ್ನ ತಲೆಯನ್ನು ಹೊರತೆಗೆಯಲು ಕಾಡಾನೆ ಪರದಾಡಿದೆ.. ವಿರಾಜಪೇಟೆ ತಾಲೂಕಿನ ತಿತಿಮತಿ ಬಳಿಯ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಇಲಾಖೆಯ ಟಿಂಬರ್ ಯಾಡ್೯ ನ ಗೇಟ್ ನಲ್ಲಿ ಕಾಡಾನೆಯೊಂದು ಸಿಲುಕಿಕೊಂಡಿದ್ದು, ಕೆಲಕಾಲ ಒದ್ದಾಡಿದೆ. ಮನೆಯಪಂಡ ಮಾಯಾ ರಾಮ್ ದಾಸ್ ಅವರ ಭದ್ಗಗೋಳ ಎಸ್ಟೇಟ್ ನ ಮುಂಬದಿ, ಅರಣ್ಯ ಡಿಪೋದಲ್ಲಿ 5 ಕಾಡಾನೆಗಳ ಹಿಂಡು ಕಂಡಿತ್ತು. ಈ ವೇಳೆಯೇ ಈ ಘಟನೆ ನಡೆದಿದ್ದು, ಈ ಕಾಡಾನೆಗೆ ರೆಡಿಯೋ ಕಾಲರ್ ಅಳವಡಿಸಲಾಗಿತ್ತು. ಆ ಬಳಿಕ ಕಾಡಾನೆ ಕಸರತ್ತು ನಡೆಸಿ ತನ್ನ ತಲೆ ಹೊರತೆಗೆದು ಪರಾರಿಯಾಗಿದೆ. ತಲೆ ಸಿಲುಕಿಕೊಂಡಿದ್ದ ಸಂಗಾತಿಯ ನೆರವಿಗೆ ಧಾವಿಸಿದ್ದ ಮತ್ತೊಂದು ಕಾಡಾನೆಯೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಜಯಪುರ ನಗರದಲ್ಲಿ ಚಿರತೆ ಪ್ರತ್ಯಕ್ಷ ; ಅರಣ್ಯಾಧಿಕಾರಿಗಳಿಂದ ಹುಡುಕಾಟ
ಇನ್ನೂ ಕೊಡಗಿನಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಇದಕ್ಕೆ ಅರಣ್ಯ ಇಲಾಖೆ ಕಾರಣ ಎನ್ನುವ ಆರೋಪವಿದೆ. ಆನೆ ಕಾರಿಡಾರ್ ಗೆ ರೈಲ್ವೆ ಕಂಬಿಯನ್ನು ಕೇವಲ 3 ಲೈನ್ ಅಳವಡಿಸಲಾಗಿದ್ದು, ಇಂಥ ಘಟನೆಗಳಿಗೆ ಕಾರಣವಾಗಿದೆ. ಅರಣ್ಯ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಆನೆ ಕಾರಿಡಾರ್ ಗೆ 4 ರಿಂದ 5 ಕಂಬಿ ಅಳವಡಿಸಬೇಕೆಂಬುದು ಹಲವರ ಒತ್ತಾಯವಾಗಿದೆ.