ಮಂಡ್ಯ: ಮಂಡ್ಯದಲ್ಲಿ ತಡರಾತ್ರಿ ಮಚ್ಚು ಲಾಂಗ್ಗಳು ಜಳಪಳಿಸಿವೆ.. ಹಳೇದ್ವೇಷದ ಹಿನ್ನೆಲೆ ರೌಡಿಶೀಟರ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶ್ರೀರಂಗಪಟ್ಟಣದ ಪಾಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಸುಪ್ಪಿ ಅಲಿಯಾಸ್ ಸುಪ್ರಿತ್ ಹತ್ಯೆಯಾದ ರೌಡಿಶೀಟರ್. ಸುಪ್ರಿತ್ ತೋಟದ ಮನೆಗೆ ತೆರಳಿತ್ತಿರುವಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದ್ದು, ಅತಿಯಾದ ರಕ್ತಸ್ರಾವದಿಂದಾಗಿ ಸುಪ್ರೀತ್ ಸಾವನ್ನಪ್ಪಿದ್ದಾನೆ. ಈ ಸಂಬಂಧ ಶ್ರೀರಂಗಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಸುಪ್ರೀತ್ ಕಳೆದ 15 ದಿನಗಳ ಹಿಂದೆ ಅಷ್ಟೇ ಜೈಲಿನಿಂದ ಬೇಲ್ ರಿಲೀಸ್ ಆಗಿ ಹೊರಬಂದಿದ್ದ ಎನ್ನಲಾಗುತ್ತಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ಕಾಮುಕನಿಗೆ 20 ವರ್ಷ ಜೈಲು ಶಿಕ್ಷೆ!