ಬಳ್ಳಾರಿ : ಅಪರಾಧ ತಡೆಗಟ್ಟುವಿಕೆ, ಸೈಬರ್ ಕ್ರೈಂ, ಬಾಲ್ಯ ವಿವಾಹ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ದೃಷ್ಠಿಯಿಂದ ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿತ್ತು. ಐದು ಕಿಲೋ ಮೀಟರ್ ವರೆಗೂ ನಡೆದ ಮ್ಯಾರಥಾನ್ನ ಓಟದಲ್ಲಿ ಪೊಲೀಸರಷ್ಟೇ ಅಲ್ಲದೇ ವಾಕಿಂಗ್ ಕ್ಲಬ್ ನ ಸದಸ್ಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಿ ಗಮನ ಸೆಳೆದರು.
ಬಳ್ಳಾರಿ ಪೊಲೀಸರಿಗೆ ಎಸ್ಪಿ ಶೋಭಾರಾಣಿ ಖಡಕ್ ವಾರ್ನ್ ; ಯಾಕ್ ಗೊತ್ತಾ..?
ಯಾವುದೇ ಒಂದು ಅಪರಾಧ ನಡೆದ ತಕ್ಷಣ ಪೊಲೀಸರ ಸಹಾಯವಾಣಿಗೆ ಕರೆ ಮಾಡಬೇಕು. ಕಳ್ಳತನ ಪ್ರಕರಣಕ್ಕಿಂತ ಇತ್ತೀಚಿನ ದಿನದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ದುರಾದೃಷ್ಟಕರ ಘಟನೆ ಏನಂದರೆ, ಈ ಸೈಬರ್ ವಂಚನೆಗೆ ವಿದ್ಯಾವಂತರೇ ಬಲಿಯಾಗುತ್ತಿದ್ದಾರೆ. ಪೊಲೀಸ್ ವ್ಯವಸ್ಥೆಯಲ್ಲಿ ಡಿಜಿಟಲ್ ಆರೆಸ್ಟ್ ಮಾಡುವ ಪದ್ಧತಿ ಇರೋದಿಲ್ಲ. ಯಾವುದೇ ಒಬ್ಬ ವ್ಯಕ್ತಿ ಅಪರಾಧ ಮಾಡಿದ್ದಾರೆಂದು ಪೋನ್ ಮೂಖಾಂತರ ಹೇಳಿ ಬಂಧಿಸಲು ಬರುವದಿಲ್ಲ. ಇದೆಲ್ಲವನ್ನೂ ಸಾರ್ವಜನಿಕರು ತಿಳಿದುಕೊಳ್ಳಬೇಕು. ಯಾರೋ ಏನೋ ಪೋನ್ ಮಾಡಿ ನೀವು ತಪ್ಪು ಮಾಡಿದ್ದೀರಾ. ನಿಮ್ಮವರು ತಪ್ಪು ಮಾಡಿದ್ದಾರೆಂದು ಸುಳ್ಳು ಕಾಲ್ ಮಾಡಿದ್ರೇ, ಅದಕ್ಕೆ ಮನ್ನಣೆ ನೀಡಬೇಡಿ ಇದೆಲ್ಲವೂ ಡಿಜಿಟಲ್ ವಂಚನೆಯಾಗಿದೆ. ಇದಕ್ಕೆ ಬಲಿಯಾಗಬೇಡಿ ಎಂದು ಪೊಲೀಸರು ಮನವಿ ಮಾಡಿದ್ರು. ಸೈಬರ್ ಕ್ರೈಂ ಸೇರಿದಂತೆ ಇತರೆ ಪ್ರಕಣ ಬಗ್ಗೆ ಜನಾಜಾಗೃತಿ ಮೂಡಿಸುವ ದೃಷ್ಠಿಯಿಂದ ಮಾಡಲಾದ ಮ್ಯಾರಾಥಾನ್ ಓಟಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿರೋದು ವಿಶೇಷವಾಗಿತ್ತು.