ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಲಾಗಿದ್ದು ಸದ್ಯ ಸೈಫ್ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೈಫ್ ಬೆನ್ನಿಗೆ ತೀವ್ರ ಗಾಯವಾಗಿದ್ದು ಅವರಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಇದರ ಬಿಲ್ ಒಂದು ವೈರಲ್ ಆಗಿದೆ.
ಜನವರು 16ರಂದು ಬೆಳಗ್ಗಿನ ಜಾವ ಸೈಫ್ ಅಲಿ ಖಾನ್ ಅವರು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆ ಬಳಿಕ ಅವರಿಗೆ ವೈದ್ಯರು ಸರ್ಜರಿ ಮಾಡಲಾಗಿದೆ. ಸೈಫ್ ಬೆನ್ನಿನ ಭಾಗದಲ್ಲಿ ಹೊಕ್ಕಿದ್ದ ಚಾಕುವಿನ ಚೂರನ್ನು ತೆಗೆಯಲಾಗಿದೆ. ಸೈಫ್ ಅಲಿ ಖಾನ್ ಅವರ ಆಸ್ಪತ್ರೆ ಬಿಲ್ 35.95 ಲಕ್ಷ ರೂಪಾಯಿ ಖರ್ಚಾಗಿದೆ. ಇನ್ಸೂರೆನ್ಸ್ ಕಂಪನಿ ಕಡೆಯಿಂದ 25 ಲಕ್ಷ ರೂಪಾಯಿ ಸಿಕ್ಕಿದೆ ಎಂದು ವರದಿ ಆಗಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಿಲ್ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋದಲ್ಲಿ ಇನ್ಸೂರೆನ್ಸ್ ಕಂಪನಿಯ ಸ್ಟೇಟ್ಮೆಂಟ್ ಇದೆ. ‘ನಿವಾ ಬುಪಾ ಹೆಲ್ತ್ ಇನ್ಸೂರೆನ್ಸ್’ ಪಡೆದಿದ್ದಾರೆ. ಸೈಫ್ ಅವರ ಆಸ್ಪತ್ರೆ ಬಿಲ್ 35.91 ಲಕ್ಷ ರೂಪಾಯಿ. ಇನ್ಸೂರೆನ್ಸ್ ಕಂಪನಿಯಿಂದ 25 ಲಕ್ಷ ಅಪ್ರೂವ್ ಸಿಕ್ಕಿದೆ ಎನ್ನಲಾಗಿದೆ. ಡಾಕ್ಯುಮೆಂಟ್ನಲ್ಲಿ ಅವರ ಮೆಂಬರ್ ಐಡಿ, ರೂಂ ಕ್ಯಾಟೆಗರಿ ಇತ್ಯಾದಿ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಇದೂ ಅಲ್ಲದೆ, ಅವರು ಜನವರಿ 21ರಂದು ಡಿಸ್ಚಾರ್ಜ್ ಆಗಲಿದ್ದಾರೆ ಎಂಬುದು ಕೂಡ ಉಲ್ಲೇಖ ಆಗಿದೆ. ಆದರೆ, ಇದು ಆಸ್ಪತ್ರೆಯ ಬಿಲ್ ಹೌದೋ ಅಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.