ವಿಜಯಪುರ: ವಿಜಯಪುರ ನಗರದಲ್ಲಿ ಚಿರತೆ ಪ್ರತ್ಯಕ್ಷಗಾಗಿದೆ ಎನ್ನಲಾಗಿದ್ದು, ನಿವಾಸಿಗಳಿಗೆ ಚಿರತೆಯ ಆತಂಕ ಶುರುವಾಗಿದೆ. ನಗರದ ಹೃದಯಭಾಗವಾದ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದ ಬಡಾವಣೆಯಲ್ಲಿ ಚಿರತೆ ಓಡಾಟ ನಡೆಸಿದೆ ಎನ್ನಲಾಗುತ್ತಿದೆ. ಚಿರತೆಯನ್ನ ಕಂಡು ಮಹಿಳೆಯೊಬ್ಬರು ಗಾಬರಿಯಾಗಿದ್ದಾರೆ. ಸದ್ಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಚಿರತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಈ ಬಗ್ಗೆ ಮಹಿಳೆ ಮಾತನಾಡಿ, ಚಿರತೆ ನೋಡಿ ಮೋದಲು ಬಾಗಿಲು ಹಾಕಿದೆ. ನಂತರ ನಮ್ಮ ತಾಯಿ ಬಡಾವಣೆಯಲ್ಲಿಯ ಜನರಿಗೆ ಎಚ್ಚರಿಸಿದೆ. ದೊಡ್ಡದಾದ ಚಿರತೆ ಇತ್ತು, ಕಂಪೌಂಡ್ ಮೇಲೆ ನಿಂತಿತ್ತು. ಬೆಳಗ್ಗೆ 10 ಗಂಟೆಗೆ ಚಿರತೆಯನ್ನ ನೋಡಿದ್ದೇನೆ. ಕೆಲ ಕ್ಷಣದ ನಂತರ ಚಿರತೆ ಅಲ್ಲಿಂದ ಮಾಯ ಆಯ್ತು ಎಂದಿದ್ದಾರೆ.