ಐಪಿಎಲ್ ಸೀಸನ್ನಲ್ಲಿ ಎಲ್ಲರ ಗಮನ ಸೆಳೆದಿದ್ದ ರಿಂಕು ಸಿಂಗ್ ಅದ್ಭುವಾದ ಪ್ರದರ್ಶನ ತೋರಿಸಿದ್ದರು. ಆ ದಿನಗಳಲ್ಲಿ ಇಂಟರ್ನೆಟ್ ನಲ್ಲಿ ಹೆಚ್ಚು ಟ್ರಿಂಡಿಂಗ್ ಇದ್ದ ವ್ಯಕ್ತಿ ಎಂದರೆ ಅದು IPL 2023 ರ ಹೀರೋ “ರಿಂಕು ಸಿಂಗ್”. ಟೀಮ್ ಇಂಡಿಯಾದ ಕ್ರಿಕೆಟ್ ಸೆನ್ಸೇಷನ್ ಆಗಿರುವ ರಿಂಕು ಸಿಂಗ್ ಅವರು ಭಾರತ ಕ್ರಿಕೆಟ್ ತಂಡದ ಭವಿಷ್ಯ ಎನ್ನಬಹುದು.
ಇದೀಗ ರಿಂಕು ಸಿಂಗ್ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಶೀಘ್ರವೇ ಇಬ್ಬರ ಮದುವೆ ನಡೆಯಲಿದೆ ಎಂಬ ಸುದ್ದಿ ಈಗ ವೈರಲ್ ಆಗಿದೆ.
ಮಹಿಳೆಯರು ಚಳಿಗಾಲದಲ್ಲಿ ಎಳ್ಳು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?
ಈ ಸುದ್ದಿಯ ಬಗ್ಗೆ ಪ್ರಿಯಾ ಅವರ ತಂದೆ ತುಫಾನಿ ಸರೋಜ್ ಪ್ರತಿಕ್ರಿಯಿಸಿ, ರಿಂಕು ಅವರ ಕುಟುಂಬ ಮದುವೆ ಪ್ರಸ್ತಾಪ ಕಳುಹಿಸಿದೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ತಿಳಿಸಿದರು. ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಈ ಸುದ್ದಿಯ ಬಗ್ಗೆ ಇಲ್ಲಿಯವರೆಗೆ ರಿಂಕು ಸಿಂಗ್ ಆಗಲಿ ಸಂಸದೆ ಪ್ರಿಯಾ ಸರೋಜ್ ಖಚಿತಪಡಿಸಿಲ್ಲ. ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಸದಸ್ಯರಾಗಿದ್ದ ರಿಂಕು ಮುಂದಿನ ವಾರದಿಂದ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಲಿದ್ದಾರೆ.
27 ವರ್ಷದ ರಿಂಕು ಆಗಸ್ಟ್ 2023 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ನಂತರ ಇಲ್ಲಿಯವರೆಗೆ ಎರಡು ಏಕದಿನ ಮತ್ತು 30 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಇಲ್ಲಿಯವರೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 562 ರನ್ ಗಳಿಸಿದ್ದಾರೆ. ತಮ್ಮ ಫಿನಿಶಿಂಗ್ ಕೌಶಲ್ಯಕ್ಕೆ ಹೆಸರುವಾಸಿಯಾಗಿರುವ ರಿಂಕು ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ.