ಬೀದರ್ : ಆಕಾಶದಿಂದ ಬಿದ್ದ ಬೃಹತ್ ಗಾತ್ರದ ಏರ್ ಬ್ಯಾಗ್ವೊಂದು ಬಿದಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕನ್ನಡದಲ್ಲಿ ಬರೆದಿರುವ ಪತ್ರ ಹಾಗೂ ಬಲೂನ್ ಸಮೇತ ನೆಲಕ್ಕುರುಳಿದ ಬೃಹತ್ ಗಾತ್ರದ ಮಷೀನ್ ಕಂಡು ಗ್ರಾಮಸ್ಥರು ಶಾಕ್ ಆಗಿದ್ದಾರೆ. ಅಲ್ಲದೇ ಈ ಮೆಷೀನ್ನಲ್ಲಿ ರೆಡ್ಲೈಟ್ ಬ್ಲಿಂಕ್ ಆಗ್ತಿರೋದು ಗ್ರಾಮಸ್ಥರನ್ನು ಭಯ ಬೀಳಿಸಿದೆ. ರಾಷ್ಟ್ರೀಯ ಸೆಂಟರ್ ಆಫ್ ಭಾರತ ಸರ್ಕಾರದಿಂದ ಬಿಟ್ಡಿರುವಂತೆಯೂ, ಹೈದರಾಬಾದ್ನಿಂದ ಬಲೂನ್ ಬಿಡಲಾಗಿದ್ದು, ಬಹುಮಾನ ನೀಡಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೆಆರ್ಎಸ್ ಬೃಂದಾವನದಲ್ಲಿ ಅಮ್ಯೂಸ್ಮೆಂಟ್ ನಿರ್ಮಾಣಕ್ಕೆ ಆರಂಭದಲ್ಲೇ ವಿಘ್ನ
TIFR ( Tata Institute of Fundamental Research) ಕಂಪನಿಯ ಸ್ಯಾಟಲೈಟ್ ಪೇಲೋಡ್ ಬಲೂನ್ ಲ್ಯಾಂಡ್ ಆದ ಬಗ್ಗೆ ಮಾಹಿತಿ ಸಿಕ್ಕಿದೆ. ಹವಾಮಾನ ಅಧ್ಯಯನಕ್ಕಾಗಿ ನಿನ್ನೆ ದಿನ ರಾತ್ರಿ 10 ಗಂಟೆಗೆ ಹೈದ್ರಾಬಾದ್ ದಿಂದ ಉಡಾವಣೆ ಮಾಡಲಾಗಿದೆ. ಈ ಬಲುನೂ ಕೇಂದ್ರ ಸರ್ಕಾರದ ಅಧ್ಯಯನ ಅಡಿಯಲ್ಲಿ ಬರುವ ಸಂಶೋಧನಾ ಸ್ಯಾಟಲೈಟ್ ಪೇಲೋಡ್ ಆಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹುಮನಾಬಾದ್ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.