ಹುಬ್ಬಳ್ಳಿ: ಮಣ್ಣಿನ ಪೋಷಕಾಂಶ ಒಗ್ಗೂಡಿಕೆ, ವೃದ್ಧಿಗೆರೈಸೊಸ್ಪಿಯರ್’ ಮತ್ತು ‘ಫಿಲ್ಲೊಸ್ಪಿಯರ್’ ದ್ರಾವಣ ಹಾಗೂ ಕಬ್ಬು ಬೆಳೆಯಲ್ಲಿ ಉರಿಮಲ್ಲಿಗೆ (ಸೈಗಾ) ಕಳೆ ನಿಯಂತ್ರಣ, ತೇವಾಂಶ ಹೀರುವಿಕೆಗೆ ‘ಮೈಕೊರೈಜ’ ಜೈವಿಕ ಗೊಬ್ಬರವನ್ನು ಕೃಷಿ ವಿಶ್ವವಿದ್ಯಾಲಯದವರು ಅಭಿವೃದ್ಧಿಪಡಿಸಿದ್ದಾರೆ. ಹುಬ್ಬಳ್ಳಿಯ ಎಸ್ಎಸ್ವಿ ಬಯೋಸೈನ್ಸ್ ಸಂಸ್ಥೆಯು ಈ ತಾಂತ್ರಿಕತೆಗಳನ್ನು ಖರೀದಿಸಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಕೃಷಿ ನವೋದ್ಯಮ ಮೇಳದಲ್ಲಿ ಈ ತಾಂತ್ರಿಕತೆಗಳನ್ನು ಪ್ರದರ್ಶಿಸಲಾಗಿದೆ.
ಕೇಂದ್ರ ಕೃಷಿ ಸಚಿವಾಲಯದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ವಿಭಾಗದ ಅಗ್ರಿ ಇನ್ನೊವೇಟಿವ್ ಕಾರ್ಯಕ್ರಮದಡಿ ಕೃಷಿ ಸೂಕ್ಷ್ಮಜೀವವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಸಿ.ಆರ್.ಪಾಟೀಲ ಅವರು ‘ರೈಸೊಸ್ಪಿಯರ್’- ‘ಫಿಲ್ಲೊಸ್ಪಿಯರ್’ ದ್ರಾವಣ ಹಾಗೂ ಅದೇ ವಿಭಾಗದ ಪ್ರೊ.ಪಿ.ಜೋನ್ಸ್ ನಿರ್ಮಲ್ನಾಥ್ ಅವರು ‘ಮೈಕೊರೈಜ’ ಜೈವಿಕ ಗೊಬ್ಬರ ತಾಂತ್ರಿಕತೆ ಸಂಶೋಧನೆ ಮಾಡಿದ್ದಾರೆ.
ಮಹಿಳೆಯರು ಚಳಿಗಾಲದಲ್ಲಿ ಎಳ್ಳು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?
‘ರೈಸೊಸ್ಪಿಯರ್’ ದ್ರಾವಣವನ್ನು ಗಿಡದ ಸುತ್ತ ಮಣ್ಣಿನಲ್ಲಿ ಹಾಕಬೇಕು, ‘ಫಿಲ್ಲೊಸ್ಪಿಯರ್’ ಅನ್ನು ಗಿಡದ ಎಲೆಗಳ ಮೇಲೆ ಸಿಂಪಡಿಸಬೇಕು. ಎಲ್ಲ ಬೆಳೆಗಳಿಗೂ ಈ ದ್ರಾವಣವನ್ನು ಬಳಸಬಹುದು. ಗಿಡಗಳಿಗೆ ಪೋಷಕಾಂಶಗಳನ್ನು (ಸಾರಜನಕ, ಪೋಟ್ಯಾಶ್, ರಂಜಕ, ಝಿಂಕ್, ಕಬ್ಬಿಣಾಂಶ…) ಒದಗಿಸುತ್ತದೆ. ಸಸ್ಯಗಳು, ಗಿಡಗಳು ಚೆನ್ನಾಗಿ ಬೆಳೆಯುತ್ತವೆ, ಫಸಲು ಹೆಚ್ಚು ನೀಡುತ್ತದೆ. ಎಸ್ಎಸ್ವಿ ಬಯೋಸೈನ್ಸ್ ಸಂಸ್ಥೆಯು ₹ 6 ಲಕ್ಷಕ್ಕೆ ಈ ತಾಂತ್ರಿಕತೆ ಖರೀದಿಸಿದೆ’ ಎಂದು ತಿಳಿಸಿದರು.
‘ರೈಸೊಸ್ಪಿಯರ್’ ‘ಫಿಲ್ಲೊಸ್ಪಿಯರ್’ ದ್ರಾವಣವನ್ನು ನಮ್ಮ ತೋಟದಲ್ಲಿ ಅಡಿಕೆ ಗಿಡ, ಕಾಳುಮೆಣಸು ಬಳ್ಳಿಗೆ ಬಳಕೆ ಮಾಡಿದ್ದೇನೆ. ಗಿಡಗಳು ಮತ್ತು ಬಳ್ಳಿ ಚೆನ್ನಾಗಿ ಬೆಳೆದಿವೆ’ ಎಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಮಾವಿನಕೊಪ್ಪದ ಕೃಷಿಕ ಶ್ರೀಪತಿ ಬಿ.ಭಟ್ ತಿಳಿಸಿದರು.
ತೇವಾಂಶ ನಿರ್ವಹಣೆ ಅಧಿಕ ಇಳುವರಿ
`ಎಕರೆಗೆ 8 ಕೆ.ಜಿ ‘ಮೈಕೊರೈಜ’ ಜೈವಿಕ ಗೊಬ್ಬರವನ್ನು ಎರಡು ಕ್ವಿಂಟಲ್ ಸಾವಯವ ಗೊಬ್ಬರಕ್ಕೆ ಮಿಶ್ರಣ ಮಾಡಿ ಮಣ್ಣಿನಲ್ಲಿ ಬೆರೆಸಬೇಕು. ಬಿತ್ತನೆ ಸಮಯದಲ್ಲಿ ಇದನ್ನು ಮಾಡಬೇಕು. ಇದರಿಂದ “ಗಾ’ ಪರವಾಲಂಬಿ ಕಳೆಯನ್ನು ನಿಯಂತ್ರಿಸಬಹುದು ತೇವಾಂಶ ನಿರ್ವಹಿಸಬಹುದು ಶೇ 10ರಿಂದ 20ರಷ್ಟು ಹೆಚ್ಚು ಇಳುವರಿ ಪಡೆಯಬಹುದು” ಎಂದು ಪ್ರೊ.ಪಿ.ಜೋನ್ಸ್ ನಿರ್ಮಲ್ನಾಥ್ ತಿಳಿಸಿದರು. ‘ಗೋಧಿ ಕಡೆಲೆ ಅಡಿಕೆ ಮೆಣಸಿಕಾಯಿ ಬೆಳೆನಗಳಿಗೂ ಈ ಗೊಬ್ಬರವನ್ನು ಬಳಸಬಹುದು. ಮೈಕೊರೈಜ ತಾಂತ್ರಿಕತೆಯನ್ನು ₹ 3.75ಲಕ್ಷಕ್ಕೆ ಎಸ್ಎಸ್ವಿ ಸಂಸ್ಥೆ ಖರೀದಿಸಿದೆ. ವಿಶ್ವವಿದ್ಯಾಲಯದಿಂದ ಎಲ್ಲ ರೈತರಿಗೆ ತಾಂತ್ರಿಕತೆ ತಲುಪಿಸುವುದು ಕಷ್ಟ. ತಾಂತ್ರಿಕತೆ ಖರೀದಿಸಿದ ಸಂಸ್ಥೆಗಳು ಬೆಳೆಗಾರರಿಗೆ ಒದಗಿಸುತ್ತವೆ’ ಎಂದರು