ಚಾಮರಾಜನಗರ:: ಸರಣಿ ಅಕ್ರಮ ಸಿಡಿಮದ್ದು ಸ್ಫೋಟಕ್ಕೆ ಜಾನುವಾರುಗಳ ಸ್ಥಿತಿ ಗಂಭೀರವಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿ ಹೆಚ್ಚಾಗ್ತಾ ಇರುವುದು ಆತಂಕಕಾರಿ ವಿಷಯವಾಗಿದೆ.
ಇಂದು ಮುಂಜಾನೆ ಹನೂರು ತಾಲೂಕಿನ ಆರ್.ಎಸ್.ದೊಡ್ಡಿ ಗ್ರಾಮದ ನಾಗಣ್ಣ ಎಂಬುವವರ ಹಸುವು ಸಿಡಿಮದ್ದು ಸ್ಪೋಟಕ ಸಿಡಿದು ಗಂಭೀರವಾದ ಗಾಯಗಳಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಹನೂರು ತಾಲುಕಿನ ಸುತ್ತಾಮುತ್ತಾ ಕಳೆದ ಹದಿನೈದು ದಿನಗಳಿಂದಲೂ ಈ ಘಟನೆಗಳು ಮರುಕಳುಹಿಸುತ್ತಿವೆ ಹಾಗೂ ಇತ್ತೀಚೆಗೆ ಕೆಲವು ವಿಕೃತ ಮನಸ್ಸಿನವರಿಗೆ ಮೂಕ ಪ್ರಾಣಿಗಳನ್ನು ಹಿಂಸಿಸುವುದೇ ಕಸುಬಾಗಿ ಬಿಟ್ಡಿದೆ.
ಹನೂರು ತಾಲೂಕಿನ ಸುತ್ತಮುತ್ತಲಿನಲ್ಲಿ ಇದೀಗ ಹಂದಿಗೆ ಇರಿಸಿದ್ದ ಅಕ್ರಮ ಸಿಡಿಮದ್ದು ಸ್ಪೊಟಗೊಂಡು ಮನುಷ್ಯರಿಗೆ ಅಮೃತ ನೀಡುವ ಹಸುಗಳು ಗಂಭೀರ ಗಾಯಗಳಾಗುತ್ತಿರುವ ಘಟನೆ ಸತತವಾಗಿ ನಡೆಯುತ್ತಿದೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಿಡಿಗೇಡಿಗಳು ಹಸುಗಳ ಕೆಚ್ಚಲು ಕತ್ತರಿಸಿದ ಘಟನೆ ಮಾಸುವ ಮುನ್ನವೇ ಹನೂರಲ್ಲಿ ಸ್ಪೋಟಕ ಸಿಡಿದು ಮುದ್ದಾದ ಹಸುವಿನ ಮುಖ ಹಾನಿಗೊಳಗಾಗಿ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ.
ಅರಣ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆ ಈ ಬಗ್ಗೆ ಎಚ್ಚೆದ್ದು ಕಾರ್ಯೋನ್ನುಖರಾಗಿ ಅಕ್ರಮ ಸ್ಪೋಟಕ ಬಳಕೆ ದಾರರ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.