ಚಾಮರಾಜನಗರ: ಕಾಡಿನಿಂದ ಹೊರ ಬರುತ್ತಿರುವ ಕಾಡಾನೆಗಳ ಗುಂಪು ಕಳೆದ ಒಂದು ವಾರದಿಂದ ರೈತರ ಫಸಲುಗಳನ್ಜು ನಾಶ ಪಡಿಸುತ್ತಿರುವ ಘಟನೆ ಮುಂದುವರಿದಿದೆ.
ಬಿಜೆಪಿ ವಿರುದ್ಧ ಅಪಪ್ರಚಾರ ಪ್ರಕರಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಾತ್ಕಾಲಿಕ ರಿಲೀಫ್!
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬೈಲೂರು ಸುತ್ತಾಮುತ್ತಾ ಕಾಡಾನೆಗಳ ಉಪಟಳ ಮಿತಿಮೀರಿದೆ..
ಒಂದು ವಾರದ ಹಿಂದೆ ಮಕ್ನಾ ಆನೆ ದಾಳಿಯಿಂದ ರಾತ್ರೋ ರಾತ್ರಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಫಸಲು ರಕ್ಷಿಸಿಕೊಳ್ಳಲು ಹೈರಾಣಾಗಿದ್ರು
ಇದೀಗ ಮೂರು ಆನೆಗಳ ಗುಂಪು ರೈತರ ನಿದ್ರೆ ಕೆಡಿಸುತ್ತಿವೆ. ಗುಂಪು ಆನೆಗಳು ರೈತರು ಬೆಳೆದ ಮುಸುಕಿನ ಜೋಳ ಸೇರಿದಂತೆ ರೈತರ ಫಸಲನ್ನು ಹಾಳು ಮಾಡುತ್ತಿವೆ
ನಿನ್ನೆ ತಡ ರಾತ್ರಿ ಹನೂರು ತಾಲೂಕು ಬೈಲೂರು ಗ್ರಾಮ ಪಂಚಾಯತ್ತಿಗೆ ಸೇರಿದ ಹುಣಸೆಪಾಳ್ಯ ಗ್ರಾಮದ ರೈತ ಮಹಿಳೆ ಪ್ರೇಮ ಸದಾನಂದ ಅವರ ಜಮೀನಿಗೆ ತಡ ರಾತ್ರಿ 3 ಆನೆಗಳು ನುಗ್ಗಿ ಜೋಳದ ಬೆಳೆ ನಾಶ ಮಾಡಿದೆ.
ಕೂಡಲೆ ಅರಣ್ಯ ಇಲಾಖೆ ಸಿಬ್ಬಂಧಿಗಳು ಆನೆಗಳನ್ನು ಕಾಡಿಗೆ ಓಡಿಸುವಂತೆ ಆ ಭಾಗದ ರೈತರು ಒತ್ತಾಯಿಸಿದ್ದಾರೆ.