ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿಯನ್ನು ಘಟನೆ ನಡೆದ 30 ಗಂಟೆಗಳಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಬಂಧಿಸಿರುವ ಮುಂಬೈ ಪೊಲೀಸರು ಆತನನ್ನು ತೀವ್ರ ವಿಚಾರಣಗೆ ಒಳಪಡಿಸಿದ್ದಾರೆ.
ಸದ್ಯ ಬಾಂದ್ರಾ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆ ತಂದಿದ್ದಾರೆ. ಅಲ್ಲಿ ಆತನ ವಿಚಾರಣೆ ನಡೆಸಲಾಗುತ್ತಿದೆ. ದಾಳಿ ಮಾಡಿದರ ಹಿಂದಿನ ಉದ್ದೇಶ ಏನು? ಆತ ಸೈಫ್ ಮನೆ ತಲುಪಿದ್ದು ಹೇಗೆ? ಈ ದಾಳಿ ಹಿಂದೆ ಬೇರೆ ಯಾರದ್ದಾದರೂ ಕೈವಾಡ ಇದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ್ದ ವ್ಯಕ್ತಿಯ ಫೋಟೋವನ್ನು ಮುಂಬೈ ಪೊಲೀಸರು ಬಹಿರಗಂಪಡಿಸಿದ್ದರು. ಗುರುವಾರ ನಸುಕಿನ 2.33 ಗಂಟೆ ಸುಮಾರಿಗೆ ದುಷ್ಕರ್ಮಿ ಅಪಾರ್ಟ್ಮೆಂಟ್ಗೆ ನುಗ್ಗಿದ್ದ. ಶಂಕಿತ ವ್ಯಕ್ತಿಯು ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದು ಬ್ಯಾಗ್ ಕೂಡ ಆತ ಧರಿಸಿದ್ದ. ಇದೀಗ ಘಟನೆ ನಡೆದ 30 ಗಂಟೆಯಲ್ಲೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೈಫ್ ಅಲಿ ಖಾನ್ ಮನೆಯಲ್ಲಿ ಸರಿಯಾದ ಭದ್ರತೆ ಇರಲಿಲ್ಲ ಎನ್ನಲಾಗಿದೆ. ಫ್ಲ್ಯಾಟ್ನ ಹೊರ ಭಾಗದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಿಲ್ಲ. ಹೀಗಾಗಿ, ಬಿಲ್ಡಿಂಗ್ಗೆ ಯಾರು ಬರುತ್ತಾರೆ ಅಥವಾ ಹೋಗುತ್ತಾರೆ ಎಂದು ಹೇಳಲು ಸಾಧ್ಯ ಇರಲಿಲ್ಲ. ಇನ್ನು, ಯಾರು ಬರುತ್ತಾರೆ ಹೋಗುತ್ತಾರೆ ಎಂಬುದನ್ನು ಬರೆದಿಡಲು ಅಲ್ಲಿ ಯಾವುದೇ ರಿಜಿಸ್ಟರ್ ಬುಕ್ ಕೂಡ ಇರಲಿಲ್ಲ. ‘ಇದು ಸೈಫ್ ಸ್ಥಾನದಲ್ಲಿ ಇರುವ ಇತರ ಸೆಲೆಬ್ರಿಟಿಗಳಿಗೂ ವೇಕಪ್ ಕಾಲ್’ ಎಂದು ಪೊಲೀಸರು ಹೇಳಿದ್ದಾರೆ.