ಬೆಂಗಳೂರು: ರಮೇಶ್ ನನ್ನ ಸ್ನೇಹಿತ, ಆದರೆ ಅನಗತ್ಯವಾಗಿ ಯಾಕೆ ಯಡಿಯೂರಪ್ಪ ಬಗ್ಗೆ ಟೀಕೆ? ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅನಿವಾರ್ಯವಾಗಿ ನಾವು ಮಾತಾಡುತ್ತಿದ್ದೇವೆ. ಯತ್ನಾಳ್ ಹೇಳ್ತಾರೆ 17 ಜನ ಕರೆ ಮಾಡಿದ್ರು ಅಂತ. ಯಾರು ಕರೆ ಮಾಡಿದ್ರು ಹೇಳಿ. ಸೋತವರ,
ಗೆದ್ದವರ ಸಭೆ ಮಾಡಲು ವಿಜಯೇಂದ್ರಗೆ ಹಕ್ಕಿದೆ. ಅಧ್ಯಕ್ಷರು ಸಮರ್ಥರಿದ್ದಾರೆ, ದುರ್ಬಲರಿಲ್ಲ. ರಮೇಶ್ ನನ್ನ ಸ್ನೇಹಿತ, ಆದರೆ ಅನಗತ್ಯವಾಗಿ ಯಾಕೆ ಯಡಿಯೂರಪ್ಪ ಬಗ್ಗೆ ಟೀಕೆ? ಯತ್ನಾಳ್ ಕೂಡ ನನ್ನ ಸ್ನೇಹಿತ. ಯಾಕೆ ವಿನಾಕಾರಣ ಟೀಕೆ? ಪಕ್ಷಕ್ಕೆ, ಹೈ ನಾಯಕರಿಗೆ ಅಪಮಾನ ಮಾಡ್ತೀರಾ? ಪಕ್ಷದ ನಿಯಮದಂತೆ ವಿಜಯೇಂದ್ರ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದು ತಿಳಿಸಿದ್ದಾರೆ.
ಚಳಿಗಾಲ ಮಾತ್ರವಲ್ಲ, ಬೇಸಿಗೆಯಲ್ಲೂ ಹಿಮ್ಮಡಿ ಒಡೆಯುತ್ತಾ..? ಕಾರಣವೇನು..? ಪರಿಹಾರಗಳು ಇಲ್ಲಿದೆ ನೋಡಿ
ಬಿಜೆಪಿ, ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಬೇಕಿತ್ತು. ಯಡಿಯೂರಪ್ಪ ವಿರುದ್ಧ ಕೆಲವರು ಮಾತಾಡ್ತಿದ್ದಾರೆ. ಸಂಘಪರಿವಾರದ ಅಭಿಪ್ರಾಯದ ಮೇಲೆ ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ. ವಿಜಯೇಂದ್ರ ಸಾಮರ್ಥ್ಯ ನೋಡಿ ರಾಷ್ಟ್ರೀಯ ನಾಯಕರು ಅವಕಾಶ ನೀಡಿದ್ದಾರೆ. ಇವರು ಮಾತಾಡೋದು ವಿಜಯೇಂದ್ರ ವಿರುದ್ಧ ಅಲ್ಲ, ಮೋದಿ ವಿರುದ್ಧ, ರಾಷ್ಟ್ರೀಯ ನಾಯಕರ ವಿರುದ್ಧ. ಯಡಿಯೂರಪ್ಪ ಅವರನ್ನ ಟೀಕಿಸೋದು ಒಂದೇ, ರಾಷ್ಟ್ರೀಯ ನಾಯಕರನ್ನ ಟೀಕಿಸೋದು ಒಂದೆ ಎಂದು ಗರಂ ಆಗಿದ್ದಾರೆ.