ಕಳೆದ ಕೆಲ ದಿನಗಳಿಂದ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಕಾಡ್ಗಿಚ್ಚು ಹಬ್ಬಿದ್ದ ಹಲವರು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಘಟನೆಯಲ್ಲಿ ಈಗಾಗಲೇ ಹಲವರು ಪ್ರಾಣ ಕಳೆದುಕೊಂಡಿದ್ದು ಸಾವಿರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ. ನೂರಾರು ಮನೆಗಳು ಸುಟ್ಟು ಕರಕಲಾಗಿದ್ದು ಜನ ಪ್ರಾಣ ಉಳಿಸಿಕೊಳ್ಳಲು ಹರಸಾಹಜ ಪಡುತ್ತಿದ್ದಾರೆ.
ಲಾಸ್ ಏಂಜಲೀಸ್ ನಲ್ಲಿ ಕಾಡ್ಗಿಚ್ಚಿನ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಜನ ಭಯ ಬಿದ್ದಿದ್ದಾರೆ. ಅಮೆರಿಕ ಹಿಂದೆಂದೂ ಕಂಡಿರದ ಕಾಡ್ಗಿಚ್ಚು ಇದಾಗಿದೆ ಎಂಬ ಬಗ್ಗೆ ವರದಿಯಾಗಿದ್ದು ಕಾಡ್ಗಿಚ್ಚಿನ ಪರಿಣಾಮ ಸದ್ಯದಲ್ಲೇ ನಡೆಯಬೇಕಿದ್ದ ಆಸ್ಕರ್ ಅವಾರ್ಡ್ ಕಾರ್ಯಕ್ರಮ ರದ್ದಾಗುತ್ತದೆ ಎಂಬ ವದಂತಿಗಳು ಕೇಳಿ ಬಂದಿತ್ತು. ಇದೀಗ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದ್ದು, ನಿಗದಿಪಡಿಸಿದ ದಿನಾಂಕದಂದೇ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.
ಕಳೆದ 96 ವರ್ಷಗಳಿಂದ ಆಸ್ಕರ್ ಅವಾರ್ಡ್ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ. ಹಾಲಿವುಡ್ನ ಪ್ರತಿಷ್ಠಿತ ಅವಾರ್ಡ್ ಫಂಕ್ಷನ್ಗಳಲ್ಲಿ ಇದು ಕೂಡ ಒಂದಾಗಿದ್ದು ಈ ಭಾರಿ 97ನೇ ಸಾಲಿನ ಅವಾರ್ಡ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಕಾಡ್ಗಿಚ್ಚಿನ ಕಾರಣದಿಂದ ರದ್ದಾಗಿದೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಅಲ್ಲಗಳೆಯಲಾಗಿದೆ ನಿಗದಿ ಪಡಿಸಿದ ದಿನಾಂಕದಂದೆ ಕಾರ್ಯಕ್ರಮ ನಡೆಯಲಿದೆ.
‘96 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಆಸ್ಕರ್ ಅವಾರ್ಡ್ ಕಾರ್ಯಕ್ರಮ ರದ್ದಾಗುತ್ತಿದೆ’ ಎಂದು ವರದಿ ಹರಿದಾಡಿತ್ತು. ಆದರೆ, ಆಸ್ಕರ್ ಮೂಲಗಳು ಇದನ್ನು ಅಲ್ಲಗಳೆದಿವೆ. ಈ ಸಂಸ್ಥೆಯಿಂದ ಸಾವಿರಕ್ಕೂ ಅಧಿಕ ಜನರಿಗೆ ಕೆಲಸ ಸಿಕ್ಕಿದೆ. ಪ್ರತಿ ವರ್ಷವೂ ಇದರಿಂದ ಸಾಕಷ್ಟು ಜನರಿಗೆ ಲಾಭ ಆಗುತ್ತಿದೆ. ಕೊವಿಡ್ ಸಂದರ್ಭದಲ್ಲೂ ಇದನ್ನು ನಿಲ್ಲಿಸಿರಲಿಲ್ಲ. ಹಾಗಗಿ ಈ ಬಾರಿಯೂ ಅವಾರ್ಡ್ ಕಾರ್ಯಕ್ರಮ ನಡೆದೇ ನಡೆಯುತ್ತದೆ ಎಂದು ವರದಿ ಆಗಿದೆ.
ಮಾರ್ಚ್ 2ರಂದು ‘ಆಸ್ಕರ್ ಅವಾರ್ಡ್’ ಕಾರ್ಯಕ್ರಮ ನಡೆಯುತ್ತಿದೆ. ದೇಶ-ವಿದೇಶದ ಸಿನಿಮಾಗಳು ಈ ಬಾರಿಯ ರೇಸ್ನಲ್ಲಿ ಇದೆ. ಈ ಪೈಕಿ ಹಲವು ವಿಭಾಗದಲ್ಲಿ ಅವಾರ್ಡ್ಗಳನ್ನು ನೀಡಲಾಗುತ್ತದೆ. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಸಿನಿಮಾ ಮೊದಲಾದ ವಿಭಾಗಗಳಲ್ಲಿ ಸಿನಿಮಾಗಳನ್ನು ಆಯ್ಕೆ ಮಾಡಲಾಗುತ್ತದೆ.
ಅಮೆರಿಕದಲ್ಲಿ ಕಾಡ್ಗಿಚ್ಚು ಸಾಕಷ್ಟು ಹಾನಿ ಉಂಟು ಮಾಡಿದೆ. ಈ ಮೊದಲು ‘ಹಾಲಿವುಡ್’ಸ್ಟುಡಿಯೋಗೂ ಬೆಂಕಿ ಬಿದ್ದಿದೆ, ಅದರ ಲೋಗೋ ಸುಟ್ಟಿದೆ ಎಂದೆಲ್ಲ ಎಐ ವಿಡಿಯೋಗಳನ್ನು ಮಾಡಿ ಹರಿಬಿಡಲಾಗಿತ್ತು. ಆದರೆ, ಆ ರೀತಿ ಆಗಿಲ್ಲ ಎಂಬುದು ಈಗ ಗೊತ್ತಾಗಿದೆ. ಭಾರತದಿಂದ ‘ಆಸ್ಕರ್ ಅವಾರ್ಡ್’ ಕಾರ್ಯಕ್ರಮಕ್ಕೆ ‘ಲಾಪತಾ ಲೇಡಿಸ್’ ಕಳುಹಿಸಲಾಗಿತ್ತು. ಆದರೆ, ಸಿನಿಮಾ ಆಯ್ಕೆ ಆಗಿಲ್ಲ.
ಇನ್ನೂ ಈ ಭಾರಿಯ ಆಸ್ಕರ್ ಗೆ ಭಾರತದಿಂದ ಕೆಲವು ಸಿನಿಮಾಗಳನ್ನು ಕಳುಹಿಸಲಾಗಿತ್ತು. ನಾಮನಿರ್ದೇಶನಗೊಂಡಿರುವ ಸಿನಿಮಾಗಳಿಗೆ ಮತದಾನ ಪ್ರಕ್ರಿಯೆ ಜನವರಿ 8ರಿಂದ ಆರಂಭಗೊಂಡಿದ್ದು ಜನವರಿ 12ರಂದು ಮತದಾನ ಮುಕ್ತಾಯಗೊಂಡಿದೆ. ಈ ಅಂತಿಮ ನಾಮನಿರ್ದೇಶನಗೊಂಡ ಸಿನಿಮಾಗಳ ಹೆಸರನ್ನು ಇಂದು(ಜನವರಿ 17) ಪ್ರಕಟಿಸಲಿದೆ. ಆಸ್ಕರ್-2025ರ ಸಮಾರಂಭವು ಮಾರ್ಚ್ 2ರಂದು ಓವೇಶನ್ ಹಾಲಿವುಡ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆಯಲಿದೆ.