ಇವರು ನನ್ನ ಬಾಲ್ಯ ಜೀವನದ ಫೇವರೆಟ್ ಟೀಚರ್. ನಮ್ಮೂರಲ್ಲಿ ಇದ್ದಿದ್ದು, ಒಂದನೇ ತರಗತಿಯಿಂದ 5ನೇ ತರಗತಿವರೆಗೂ ಮಾತ್ರ. ನನ್ನ ನೆನಪುಗಳ ಬತ್ತಳಿಕೆಯಲ್ಲಿರೋದು, ನಾಲ್ಕರಿಂದ ಐದನೇ ತರಗತಿ ಮಾತ್ರ. ನಮ್ಮೂರ ಶಾಲೆಗೆ ಬರಬೇಕು ಅಂದ್ರೆ…? ಬಸ್ ಸ್ಟ್ಯಾಂಡ್ ಇಂದ ಇಳಿದು ಎರಡುವರೆ ಕಿಲೋಮೀಟರ್ ಶಾಲೆಗೆ ನೆಡೆದು ಬರಬೇಕಿತ್ತು. ನಮ್ ಟೀಚರ್ ಬೆಳಗ್ಗೆ ಹೇಗೋ…! ನೆಡೆದುಕೊಂಡು ಬಂದು ಬಿಡೋರು. ಬೆಳಗ್ಗೆಯಿಂದ ಸಂಜೆವರೆಗೂ ಪಾಠ ಮಾಡಿ ಮತ್ತೆ ಎರಡುವರೆ ಕಿಲೋಮೀಟರ್ ಹೋಗಿ ಬಸ್ ಹತ್ತಬೇಕಿತ್ತಲ್ಲ.
ಆ ಕಷ್ಟ ನನ್ ಕಣ್ಮುಂದೆ ಹಾಗೆ ಇದೆ. ಈ ಅಂಚೆ ಪತ್ರಗಳನ್ನ ಬರೆಯೋ ಅಂತ್ಯದ ಕಾಲ ಅನ್ಸುತ್ತೆ ಅದು. ಮೊಬೈಲ್ ಅನ್ನು ಮಾಯ ಲೋಕ…! ಆಗ್ತಾನೆ ಅಂಬೆಗಾಲಿಟ್ಟಂತ ಸಮಯ. ನಮ್ಮೂರಲ್ಲಿ ಮೂರ್ನಾಲ್ಕು ಜನ ಹತ್ರ ಇತ್ತು ಅನ್ಸುತ್ತೆ. ಅವತ್ತು ನಮ್ ಟೀಚರ ಬೆಳಗ್ಗೆ ನೆಡದ್ ಬಂದು ಬಾಟಲ್ ನಲ್ಲಿ ನೀರ್ ಕುಡಿದು… ಸುಸ್ತಾಗಿ ಟೇಬಲ್ ಮೇಲೆ ಕೂತಿದ್ರು. ಅವರು ಕೂತಂತ ಕುರ್ಚಿ ಹಿಂದೆ ಸಿಕಾಕಿದ ವ್ಯಾನಿಟಿ ಬ್ಯಾಗ್ ನಿಂದ ಒಂದಿಷ್ಟು ಖಾಲಿ ಅಂಚೆ ಪತ್ರಗಳನ್ನ ಹೊರ ತೆಗೆದ್ರು. ನಮಗೆ ಎಂದೂ ಆಗದ ಕುತೂಹಲದ ಸಮಯ ಅದು. ನನ್ನ ಪಕ್ಕದಲ್ಲಿದ್ದ ಸಹಪಾಠಿಯನ್ನು ಕರೆದು ಎಲ್ಲರಿಗೂ ಈ ಅಂಚೆ ಪತ್ರಗಳನ್ನ ಕೊಡು ಅಂದ್ರು. ಆ ಪತ್ರ ನಾನು ಕೈ ಸೇರುತ್ತಿದ್ದಂತೆ.
ಕುತೂಹಲ ಇಮ್ಮಡಿ ಯಾಗಿತ್ತು. ಟೀಚರ್ ಮೇಲೆದ್ದು, ಟೇಬಲ್ ಮೇಲಿದ್ದ ಚಪಿಸ್ ತಗೊಂಡು, ಬೋರ್ಡ್ ಮೇಲೆ ಬರೆಯೋಕೆ ಶುರು ಮಾಡಿದ್ರು. ಇಂದ/ಇವರಿಗೆ ಅಡ್ರೆಸ್ ಹೇಗೆ ಬರಿಬೇಕು ಅಂತ ಬೋರ್ಡ್ ಮೇಲೆ ಬರೆದ್ರು. ನೋಡಿ ಮಕ್ಳ ನಿಮ್ಮಜ್ಜಿ ಊರಿಗೆ ಪತ್ರ ಬರಿತಿದ್ದೀರಾ ನೀವೇ ವಿಷಯವನ್ನ ಬರಿಬೇಕು ಅಂದ್ರು. ಕನ್ನಡವನ್ನು ತಪ್ಪಾಗಿ ಬರೆಯುತ್ತಿದ್ದ ಸಮಯ ಅದು. ಹಾಗೂ ಹೀಗೋ ಮಾಡಿ ಟೀಚರನ್ನೇ ಕೇಳಿ ಅಪ್ಪಾಜಿ ಬಳಿ ಅಡ್ರೆಸ್ ಇಸ್ಕೊಂಡು ಪತ್ರ ಬರೆದು ಕಂಪ್ಲೀಟ್ ಮಾಡಿ ಟೀಚರ್ಗೆ ಕೊಟ್ವಿ. ಅವತ್ತಿಡಿ ದಿನ ಪತ್ರ ಬರವಣಿಗೆ ಗುಂಗಲ್ಲೇ ಕಳೆದು ಹೋಗಿದ್ವಿ. ಮತ್ತೊಂದು ಆಲೋಚನೆ ಶುರುವಾಯಿತು ಪೋಸ್ಟ್ ಬಾಕ್ಸ್ ಗೆ ಹಾಕಿದ್ಮೇಲೆ ಈ ಪತ್ರ ಭೂಮಿ ಒಳಗಡೆಯಿಂದ ಹೋಗಿ ಅಲ್ಲಿ ತಲುಪುತ್ತಾ? ಭೂಮಿ ಒಳಗಡೆ ಯಾರಾದರೂ ಇದ್ದಾರಾ ಅಂತಹ ನಮ್ಮ ಸಹಪಾಠಿಯಲ್ಲಿ ಚರ್ಚೆ ಶುರುವಾಯಿತು.
ಎರಡು ಮೂರು ದಿವಸ ಆದ್ಮೇಲೆ ಇದು ಮರ್ತೆಹೋಯಿತು. ಎರಡು ತಿಂಗಳ ಬಳಿಕ ಅಜ್ಜಿ ಊರಿಗೆ ಅಂತ ಹೋದೆ ಅಲ್ಲಿ ನನಗೊಂದು ಸರ್ಪ್ರೈಸ್ ಕಾದಿತ್ತು. ಎಲ್ಲರೂ ಆಶ್ಚರ್ಯದಿಂದ ನೋಡಕ್ ಶುರು ಮಾಡಿದ್ರು ನೀನ್ ಬರೆದ ಪತ್ರ ಅಣ್ಣ ಓದಿದ ಬಾಳ ಖುಷಿ ಆಯಿತು ಮಗ ಅಂತ ನಮ್ ದೊಡ್ಡಮ್ಮ ಹೇಳಿ ಆ ಪತ್ರ ನನ್ ಕೈಲಿಟ್ಟಾಗ ಅವತ್ತು ನನಗೆ ಆದಂತಹ ಖುಷಿಗೆ ಮಾತೆ ಬರ್ಲಿಲ್ಲ. ನಾನಿವತ್ತು ಇದನ್ನ ನೆನಪು ಮಾಡುವುದಕ್ಕೆ ಕಾರಣ ಇದೆ. ಬಹುಷಃ 25 ವರ್ಷಗಳ ಕಾಲ ನಮ್ಮೂರಿನ ಟೀಚರ್ ಆಗಿ ಕಾರ್ಯನಿರ್ವಹಿಸಿ ಬೇರೆ ಕಡೆ ವರ್ಗಾವಣೆ ಆಗಿದೆ.
ಶುಕ್ರವಾರದಂದು ತಪ್ಪಿಯೂ ಈ ಕೆಲಸಗಳನ್ನು ಮಾಡದಿರಿ..! ಲಕ್ಷ್ಮೀ ಮುನಿಯುವುದು ಗ್ಯಾರೆಂಟಿ
ಅವರಿಗೆ ಬಿಳ್ಕೊಡುಗೆ ಸಮಾರಂಭವನ್ನು ಇಟ್ಕೊಂಡಿದ್ದರು ಇಡೀ ಊರಿನ ಗ್ರಾಮಸ್ಥರು ಮಕ್ಕಳು ಬಿಕ್ಕಿ-ಬಿಕ್ಕಿ ಅಳ್ತಾ ಇದ್ರು ಅಂತ ನನ್ ತಂದೆ ಫೋನ್ನಲ್ಲಿ ಹೇಳಿದಾಗ. ಒಂದು ಕ್ಷಣ ನನಗೆ ನನ್ನ ಶಾಲಾ ದಿನಗಳು ನೆನಪಾದವು. ಅವರನ್ನ ದ್ವೇಷಿಸುವ ವ್ಯಕ್ತಿಗಳೆ ಇಲ್ಲ ಅನ್ಸುತ್ತೆ. ತುಂಬಾ ಸೌಮ್ಯ ಸ್ವಭಾವದವರು ತುಂಬ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರು. ಮತ್ತೆ ನನ್ನಂತ ಇಷ್ಟು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನ ಹಂಚಿದವರು. ನೀವು ಯಾವತ್ತು ನಮ್ಮ ಬಾಲ್ಯದ ಫೆವರೇಟ್ ಟೀಚರ್. ನಿಮ್ಮ ಪ್ರಯಾಣ ಇನ್ನಷ್ಟು ಸುಖಕರವಾಗಿರಲಿ ಟೀಚರ್. ಇಂತಿ ನಿಮ್ಮ ಪ್ರೀತಿಯ ವಿದ್ಯಾರ್ಥಿ.
– ಪೃಥ್ವಿರಾಜ್ C.G…