ಹೆಚ್ಚಾಗಿ ಎಳ್ಳನ್ನು ಪ್ರತಿದಿನ ಬಳಕೆ ಮಾಡುವುದು ಕಡಿಮೆ. ಕೆಲವರಂತೂ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಮಾತ್ರ ತಿನ್ನುತ್ತಾರೆ. ಆದರೆ ಎಳ್ಳಿನಿಂದ ಹಲವಾರು ಪ್ರಯೋಜನಗಳಿವೆ. ಪ್ರತಿದಿನ ಸ್ವಲ್ಪ ಎಳ್ಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅದಲ್ಲದೆ ಮನೆಯಲ್ಲಿ ಎಳ್ಳಿನ ಲಡ್ಡುಗಳನ್ನು ತಯಾರಿಸುವ ಮಹಿಳೆಯರಿಗೆ ಎಳ್ಳು ತಿನ್ನುವುದು ಎಷ್ಟು ಪ್ರಯೋಜನಕಾರಿ ಎಂದು ತಿಳಿದಿಲ್ಲ. ಚಳಿಗಾಲದಲ್ಲಿ ಎಳ್ಳು ಬೀಜಗಳನ್ನು ಅಥವಾ ಎಳ್ಳಿನ ಲಡ್ಡು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ಇಲ್ಲಿ ತಿಳಿಸದ್ದೇವೆ.
ಚಳಿಗಾಲದಲ್ಲಿ ಮಹಿಳೆಯರು ಎಳ್ಳು ತಿನ್ನುವುದರಿಂದ ಆಗುವ ಪ್ರಯೋಜನಗಳು:
ಎಲುಬುಗಳು ಗಟ್ಟಿಯಾಗುತ್ತವೆ
ಚಳಿಗಾಲದಲ್ಲಿ ಮಹಿಳೆಯರು ಎಳ್ಳು ತಿಂದರೆ ಅದು ಅವರ ಎಲುಬುಗಳನ್ನು ಗಟ್ಟಿಗೊಳಿಸುತ್ತದೆ. ಏಕೆಂದರೆ ಎಳ್ಳಿನಲ್ಲಿ ಕ್ಯಾಲ್ಸಿಯಂ, ಅಮೈನೋ ಆಮ್ಲಗಳಿವೆ. ಅವು ಎಲುಬುಗಳನ್ನು ಬಲಪಡಿಸಲು ಚೆನ್ನಾಗಿ ಸಹಾಯ ಮಾಡುತ್ತವೆ. ಅಷ್ಟೇ ಅಲ್ಲದೆ, ಎಳ್ಳನ್ನು ನಿಯಮಿತವಾಗಿ ತಿನ್ನುವುದರಿಂದ ದೈಹಿಕ ಆಯಾಸ, ದೌರ್ಬಲ್ಯ ಕಡಿಮೆಯಾಗುತ್ತದೆ.
ಅನಿಯಮಿತ ಋತುಚಕ್ರದ ಸಮಸ್ಯೆ ಕಡಿಮೆಯಾಗುತ್ತದೆ
ಕೆಟ್ಟ ಆಹಾರ ಪದ್ಧತಿ, ಮಾನಸಿಕ ಒತ್ತಡದಿಂದಾಗಿ ಹಲವು ಬಾರಿ ಮಹಿಳೆಯರಿಗೆ ಅನಿಯಮಿತ ಋತುಚಕ್ರದ ಸಮಸ್ಯೆ ಬರುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಎಳ್ಳು ತಿನ್ನುವುದರಿಂದ ಈ ಸಮಸ್ಯೆಯಿಂದ ತಕ್ಷಣ ಪರಿಹಾರ ಸಿಗುತ್ತದೆ. ಏಕೆಂದರೆ ಎಳ್ಳಿನಲ್ಲಿರುವ ಕೊಬ್ಬಿನಾಮ್ಲ ಅನಿಯಮಿತ ಋತುಚಕ್ರವನ್ನು ನಿಯಂತ್ರಿಸುತ್ತದೆ.
ಬೆನ್ನು ನೋವಿನ ಸಮಸ್ಯೆ ಕಡಿಮೆಯಾಗುತ್ತದೆ
ಚಳಿಗಾಲ ಬಂದಿದೆ ಎಂದರೆ ಕೆಲವು ಮಹಿಳೆಯರಿಗೆ ಬೆನ್ನು ನೋವಿನ ಸಮಸ್ಯೆಯೂ ಬರುತ್ತದೆ. ಇಂತಹ ಸಂದರ್ಭದಲ್ಲಿ ಅವರು ಪ್ರತಿದಿನ ಒಂದು ಚಮಚ ಹುರಿದ ಎಳ್ಳು ತಿಂದರೆ ಬೆನ್ನು ನೋವಿನಿಂದ ತಕ್ಷಣ ಪರಿಹಾರ ಸಿಗುತ್ತದೆ.
ರಕ್ತಹೀನತೆ ಕಡಿಮೆಯಾಗುತ್ತದೆ
ನಮ್ಮ ದೇಶದಲ್ಲಿ ಹಲವು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಇದರಿಂದಾಗಿ ಅವರಿಗೆ ಪೌಷ್ಟಿಕಾಂಶದ ಕೊರತೆ ಉಂಟಾಗಿ ರಕ್ತಹೀನತೆಗೆ ಒಳಗಾಗುತ್ತಾರೆ. ಆದ್ದರಿಂದ ಇದನ್ನು ತಡೆಯಲು ಅವರ ಆಹಾರದಲ್ಲಿ ಎಳ್ಳನ್ನು ಸೇರಿಸಿಕೊಳ್ಳುವುದು ಬಹಳ ಮುಖ್ಯ. ಎಳ್ಳಿನಲ್ಲಿರುವ ಜೀವಸತ್ವಗಳು, ಖನಿಜಗಳು ಅವರ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ, ರಕ್ತಹೀನತೆಯ ಸಮಸ್ಯೆಗಳಿಂದ ಅವರನ್ನು ಮುಕ್ತಗೊಳಿಸುತ್ತವೆ.
ಚರ್ಮಕ್ಕೆ ಒಳ್ಳೆಯದು
ಚಳಿಗಾಲದಲ್ಲಿ ಮಹಿಳೆಯರು ಎಳ್ಳು ತಿಂದರೆ, ಅದರಲ್ಲಿರುವ ವಿಟಮಿನ್ ಬಿ, ವಿಟಮಿನ್ ಇ ಚರ್ಮಕ್ಕೆ ಪೋಷಣೆ ನೀಡಿ ಚರ್ಮವನ್ನು ಮೃದುವಾಗಿಸುತ್ತದೆ, ಕಾಂತಿಯುತವಾಗಿಸುತ್ತದೆ.
ಶಕ್ತಿಯನ್ನು ಹೆಚ್ಚಿಸುತ್ತದೆ
ಚಳಿಗಾಲದಲ್ಲಿ ದೇಹದಲ್ಲಿ ಶಕ್ತಿ ಕಡಿಮೆಯಾಗಿ, ಆಲಸ್ಯ ಉಂಟಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಮಹಿಳೆಯರು ಎಳ್ಳನ್ನು ನಿಯಮಿತವಾಗಿ ತಿಂದರೆ, ಅದರಲ್ಲಿರುವ ಒಮೆಗಾ 3 ಆಮ್ಲ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಪೂರ್ಣವಾಗಿ ಒದಗಿಸುತ್ತದೆ.
ಎಷ್ಟು ತಿನ್ನಬೇಕು?
ಎಳ್ಳು ಸ್ವಾಭಾವಿಕವಾಗಿಯೇ ಬಿಸಿಯಾಗಿರುವುದರಿಂದ ಅದನ್ನು ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಷ್ಟೇ ಅಲ್ಲದೆ, ಚಳಿಗಾಲದಲ್ಲಿ ನೀವು ಎಳ್ಳು ತಿನ್ನಬೇಕೆಂದರೆ ಅದನ್ನು ಲಘುವಾಗಿ ಹುರಿದು ಗಾಳಿಯಾಡದ ಗಾಜಿನ ಡಬ್ಬದಲ್ಲಿ ಶೇಖರಿಸಿ ಪ್ರತಿದಿನ ಬೆಳಿಗ್ಗೆ ಒಂದು ಚಮಚ, ಸಂಜೆ ಒಂದು ಚಮಚ ತಿನ್ನಬಹುದು. ಆದರೆ ಮಿತಿಮೀರಿ ತಿನ್ನಬಾರದು ಎಂಬುದನ್ನು ನೆನಪಿನಲ್ಲಿಡಿ.