ಬೆಂಗಳೂರು/ಬೆಳಗಾವಿ:- ಬೆಳಗಾವಿ ಚಳಿಗಾಲ ಅಧಿವೇಶನದ ಕೊನೆಯ ದಿನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವಾಚ್ಯ ಶಬ್ದ ಬಳಸಿದ್ದಾರೆ ಎಂದು ಆರೋಪಿಸಿ ನಂತರ ಅವರನ್ನು ಪೊಲೀಸರು ಬಂಧಿಸಿ ದೂರು ದಾಖಲಾಗಿ ಆರೋಪ-ಪ್ರತ್ಯಾರೋಪಗಳು ಸಾಗಿ ಇಡೀ ರಾಜ್ಯಾದ್ಯಂತ ಸುದ್ದಿಯಾಗಿತ್ತು.
ವಿದೇಶದಿಂದ ಬೆಂಗಳೂರಿಗೆ ಬಂತು ಕೋಟಿ-ಕೋಟಿ ಮೌಲ್ಯದ ಗಾಂಜಾ! ಅಧಿಕಾರಿಗಳು ಪತ್ತೆ ಹಚ್ಚಿದ್ದೇಗೆ!?
ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಇದೀಗ CID ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದೆ. ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಎಂಎಲ್ಸಿ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದು ಖಚಿತ ಎಂದು ಸಿಐಡಿ ಮೂಲಗಳು ತಿಳಿಸಿವೆ. ಅಸಲಿ ವೀಡಿಯೋ ಇದೀಗ ಸಿಐಡಿಗೆ ಲಭ್ಯವಾಗಿದೆ.
ಸಿ.ಟಿ.ರವಿ ವಾಯ್ಸ್ ಸ್ಯಾಂಪಲ್ ಪಡೆಯಲು ಸಿಐಡಿ ಮುಂದಾಗಿತ್ತು. ಆದರೆ, ಅದಕ್ಕೆ ಸಿ.ಟಿ.ರವಿ ನಿರಾಕರಿಸಿದ್ದರು. ಕೊನೆಗೆ ಡಿಪಿಎಆರ್ನಿಂದ ಅಸಲಿ ವೀಡಿಯೋವನ್ನು ಸಿಐಡಿ ವಶಕ್ಕೆ ಪಡೆದಿತ್ತು.
ಅಧಿವೇಶನದ ವೇಳೆ ಮೇಲ್ಮನೆಯಲ್ಲಿ ನಡೆದಿದ್ದ ಘಟನಾವಳಿಗಳ ಕುರಿತು ವೀಡಿಯೋ-ಆಡಿಯೋ ದಾಖಲೆ ನೀಡುವಂತೆ ರಾಜ್ಯ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಗೆ ಸಿಐಡಿ ಮನವಿ ಮಾಡಿತ್ತು.