ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಪಾರ್ಕಿಂಗ್ ನಿಷೇಧ ಮಾಡಲಾಗಿದೆ. ಲಾಲ್ಬಾಗ್ನಲ್ಲಿ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಬರುವ ಸಾಧ್ಯತೆ ಇದೆ. ಹೀಗಾಗಿ, ಸಂಚಾರ ದಟ್ಟಣೆಯನ್ನು ತಪ್ಪಿಸಲು, ಬೆಂಗಳೂರು ಸಂಚಾರ ಪೊಲೀಸರು ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಪಾರ್ಕಿಂಗ್ಗೆ ನಿರ್ಬಂಧ ವಿಧಿಸಿದ್ದಾರೆ
ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್: ಇನ್ಫೋಸಿಸ್ ಸಂಸ್ಥೆಯಿಂದ ಅರ್ಜಿ ಆಹ್ವಾನ!
ಸಂಚಾರ ನಿರ್ಬಂಧ
10ನೇ ಕ್ರಾಸ್ ಡಾ. ಮರಿಗೌಡ ರಸ್ತೆ: ಡೈರಿ ಸರ್ಕಲ್ ಕಡೆಯಿಂದ ಲಾಲ್ಬಾಗ ಕಡೆಗೆ ಬರುವ ವಾಹನಗಳಿಗೆ ನಿರ್ಬಂಧಿಸಲಾಗಿದೆ.
ಲಾಲ್ಬಾಗ್ ರಸ್ತೆ, ಊರ್ವಶಿ ಜಂಕ್ಷನ್: ಸುಬ್ಬಯ್ಯ ಸರ್ಕಲ್ ಕಡೆಯಿಂದ ಲಾಲ್ಬಾಗ್ ಮುಖ್ಯ ದ್ವಾರದ ಕಡೆಗೆ ಬರುವ ವಾಹನಗಳಿಗೆ ನಿರ್ಬಂಧಿಸಲಾಗಿದೆ.
ಸಿದ್ದಯ್ಯ ರಸ್ತೆ ಕಡೆಯಿಂದ ಲಾಲ್ಬಾಗ್ ಮುಖ್ಯ ದ್ವಾರದ ಕಡೆಗೆ ಬರುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಪರ್ಯಾಯ ಮಾರ್ಗ:
10ನೇ ಕ್ರಾಸ್ ಡಾ. ಮರಿಗೌಡ ರಸ್ತೆ
ಡೈರಿ ಸರ್ಕಲ್ ಕಡೆಯಿಂದ ಲಾಲ್ಬಾಗ ಕಡೆಗೆ ಬರುವ ವಾಹನಗಳು 10ನೇ ಕ್ರಾಸ್ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ಸಿ.ಟಿ ಮಾರ್ಕೇಟ್, ಮೆಜಿಸ್ಟಿಕ್, ಕಡೆಗೆ ಎಲ್ಸನ್ ಗಾರ್ಡನ್ ಮುಖ್ಯ ರಸ್ತೆಯ ಹಾಗೂ ಬಿಟಿಎಸ್ ರಸ್ತೆಯ ಮುಖಾಂತರ ಬಿಎಮ್ಟಿಸಿ (ಕೆ.ಹೆಚ್) ರಸ್ತೆಯ ಕಡೆಗೆ ಸಂಪರ್ಕಿಸಬಹುದಾಗಿದೆ.
ಊರ್ವಶಿ ಜಂಕ್ಷನ್, ಲಾಲ್ಬಾಗ್ ರಸ್ತೆ
ಸುಬ್ಬಯ್ಯ ಸರ್ಕಲ್ ಕಡೆಯಿಂದ, ಸಿಟಿ ಮಾರ್ಕೇಟ್ ಕಡೆಯಿಂದ, ಲಾಲ್ಬಾಗ, ಜಯನಗರ, ಎಲೇಕ್ಟ್ರಾನಿಕ್ ಸಿಟಿ, ಹೊಸೂರು ಕಡೆ ಸಂಚರಿಸುವ ವಾಹನಗಳು ಊರ್ವಶಿ ಜಂಕ್ಷನ್ನಲ್ಲಿ ನೇರ ಹಾಗೂ ಎಡ ತಿರುವು ಪಡೆದು ಸಿದ್ದಯ್ಯ ರಸ್ತೆಯ ಮುಖಾಂತರ ಸಂಚರಿಸಿ ಡಾ. ಮಂಗೌಡ ರಸ್ತೆಗೆ ಸಂಪರ್ಕಿಸಬಹುದಾಗಿದೆ.
ವಾಹನಗಳ ನಿಲುಗಡೆ ನಿಷೇಧಿಸಿರುವ ರಸ್ತೆಗಳು
ಡಾ. ಮರಿಗೌಡ ರಸ್ತೆ, ಲಾಲ್ ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ನಿಷೇಧಿಸಲಾಗಿದೆ.
ಕೆ.ಹೆಚ್.ರಸ್ತೆ, ಕೆ.ಹೆಚ್.ವೃತ್ತದಿಂದ ಶಾಂತಿನಗರ ಜಂಕ್ಷನ್ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ನಿಷೇಧಿಸಲಾಗಿದೆ.
ಲಾಲ್ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್ಭಾಗ್ ಮುಖ್ಯದ್ವಾರದವರೆಗೆ ನಿಷೇಧಿಸಲಾಗಿದೆ.
ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್ ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್ವರೆಗೆ ನಿಷೇಧಿಸಲಾಗಿದೆ.
ಬಿಟಿಎಸ್ ಬಸ್ ಸ್ಟಾಪ್ ಬಿಎಂಟಿಸಿ ಜಂಕ್ಷನ್ನಿಂದ ಪೋಸ್ಟ್ ಆಫೀಸ್ ರಸ್ತೆಯ ಎರಡೂ ಬದಿಗಳಲ್ಲಿ ನಿಷೇಧಿಸಲಾಗಿದೆ.
ಕೃಂಬಿಗಲ್ ರಸ್ತೆಯ ಎರಡೂ ಕಡೆಗಳಲ್ಲಿ ನಿಷೇಧಿಸಲಾಗಿದೆ.
ಲಾಲ್ಬಾಗ್ ವೆಸ್ಟ್ಗೇಟ್ನಿಂದ ಆರ್.ವಿ. ಟೀಚರ್ ಕಾಲೇಜ್ವರೆಗೆ ನಿಷೇಧಿಸಲಾಗಿದೆ.
ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು
ಡಾ. ಮರಿಗೌಡ ರಸ್ತೆ, ಆಲ್ ಅಮೀನ್ ಕಾಲೇಜ್ ಆವರಣದಲ್ಲಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
ಕೆ.ಹೆಚ್.ರಸ್ತೆ, ಶಾಂತಿನಗರ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
ಡಾ. ಮರಿಗೌಡ ರಸ್ತೆ-ಹಾಪ್ ಕಾಮ್ಸ್ ನಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
ಜೆ.ಸಿ. ರಸ್ತೆ ಕಾರ್ಪೋರೇಷನ್ ಪಾರ್ಕಿಂಗ್ ಸ್ಥಳದಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
ಪರ್ಯಾಯ ಮಾರ್ಗಗಳು:
ಪಿ.ಎಂ.ಕೆ ರಸ್ತೆಯಿಂದ ಮೈಸೂರು ರಸ್ತೆಗೆ ಹೋಗುವ ವಾಹನ ಸವಾರರು ಮಿಂಟೊ ಜಂಕ್ಷನ್ ಬಳಿ ಎಡ ತಿರುವನ್ನು ಪಡೆದು ಎವಿ ರಸ್ತೆಯಲ್ಲಿ ಚಲಿಸಿ ಹೊಸದಾಗಿ ನಿರ್ಮಿಸಿರುವ ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣೆಯ ಬಳಿ ಬಲ ತಿರುವು ಪಡೆದು ಮೈಸೂರು ರಸ್ತೆಗೆ ಸಂಪರ್ಕ ಪಡೆದು ಸಂಚರಿಸಬಹುದಾಗಿದೆ.