ಬೆಂಗಳೂರು/ ನವದೆಹಲಿ: ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ ಸಿಕ್ಕಿದ್ದು, 8ನೇ ವೇತನ ಆಯೋಗಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ಒಂದು ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನ್ ವೈಷ್ಣವ್ 8ನೇ ವೇತನ ಆಯೋಗಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
7ನೇ ವೇತನ ಆಯೋವನ್ನು 2016 ರಲ್ಲಿ ಅಳವಡಿಸಲಾಗಿತ್ತು. ಸದ್ಯ ಅದರ ಅವಧಿ 2026ಕ್ಕೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಈಗ 8ನೇ ವೇತನ ಆಯೋಗಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಈಗ ಒಪ್ಪಿಗೆ ನೀಡಲಾಗಿರುವ 8ನೇ ವೇತನ ಆಯೋಗದ ಫಲಾನುಭವ 2026ರಿಂದ ಸಿಗಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ದೇಶದಲ್ಲಿ ಒಟ್ಟು ಒಂದು ಕೋಟಿಗೂ ಅಧಿಕ ಜನರು ಕೇಂದ್ರ ಸರ್ಕಾರಿ ನೌಕರರು ಹಾಗೂ ನಿವೃತ್ತಿಗೊಂಡವರು ಇದ್ದಾರೆ. ಕಳೆದ ಹಲವು ವರ್ಷಗಳಿಂದ 8ನೇ ವೇತನ ಆಯೋಗಕ್ಕೆ ಯಾವಾಗ ಒಪ್ಪಿಗೆ ಸಿಗಲಿದೆ ಎಂದು ಕಾಯುತ್ತಿದ್ದರು. ಸದ್ಯ ಅವರ ನಿರೀಕ್ಷೆಯಂತೆ 8ನೇ ವೇತನ ಅಯೋಗಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ..