ದಾವಣಗೆರೆ :ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಕೊಲೆಗಡುಗ ಸರ್ಕಾರ ಎಂದು ದಾವಣಗೆರೆಯಲ್ಲಿ ಸರ್ಕಾರದ ವಿರುದ್ದ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಗುಡುಗಿದರು.
ಯಕ್ಷಗಾನಕ್ಕೆ ಖಾಕಿ ಬ್ರೇಕ್ ವಿಚಾರ: ರಾಜಕೀಯ ದಾಳಮಾಡಿಕೊಂಡ್ರಾ ಬಿಜೆಪಿ- ಕಾಂಗ್ರೆಸ್!?
ತಾಯಿ ಎದೆ ಹಾಲಿನ ನಂತರ ಗೋವಿನ ಹಾಲನ್ನು ಕುಡಿಯುತ್ತೇವೆ.ಅಂತಹ ಗೋವುಗಳಿಗೆ ನೋವುಂಟು ಮಾಡಿದೆ ಈ ಸರ್ಕಾರ.ಈ ಸರ್ಕಾರಕ್ಕೆ ಗೋವಿನ ಶಾಪ ತಟ್ಟಿ ಸರ್ಕಾರ ಪತನವಾಗುತ್ತದೆ. ಗೋವು ನರಳಾಡುವಂತೆ ಮಾಡಲು ಸಿದ್ದರಾಮಯ್ಯ ಜಮೀರ್ ನೇರಕಾರಣ
ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಮೇಶ್ ಜಾರಕಿಹೊಳಿ ಯಾರು ಎನ್ನುವುದು ನಮಗೆ ಗೊತ್ತಿಲ್ಲ.ಬಿಜೆಪಿ ಅಧಿಕಾರಕ್ಕೆ ಬರಲು ಅವರೊಬ್ಬರೇ ಕಾರಣ ಅಲ್ಲ.ಕಾಂಗ್ರೆಸ್ ತೊರೆದು 17 ಜನ ಶಾಸಕರು ಬಿಜೆಪಿ ಬಂದಿದ್ದು ಯಡಿಯೂರಪ್ಪ ಸಿಎಂ ಮಾಡಲು. ಯಡಿಯೂರಪ್ಪ ನವರನ್ನು ಕೆಳಗೆ ಇಳಿಸಿದ್ದಕ್ಕೆ 2013 ರಲ್ಲಿ 66 ಸೀಟ್ ಬಂತು.ರಮೇಶ್ ಜಾರಕಿಹೊಳಿ ನನಗೆ ಅತ್ಮೀಯ ಸ್ನೇಹಿತ ನಾನು ಅವರು ಚನ್ನಾಗಿಯೇ ಇದ್ದೇವೆ.ರಮೇಶ್ ಜಾರಕಿಹೊಳಿ ಹಿಂದೆ ಇರುವವರು ಗುಂಡು ಹಾರಿಸುತ್ತಿದ್ದಾರೆ ಎಂದರು.
ರಮೇಶ್ ಜಾರಕಿಹೊಳಿ ರಾಜಕೀಯದಲ್ಲಿ ಕಣ್ಣು ಬಿಡುವುದಿಕ್ಕಿಂತ ಮುಂಚೆ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಿದ್ದಾರೆ. ಇಂತಹ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದರೆ ಸರಿ ಇರೋದಿಲ್ಲ. ಇದೇ ಮುಂದುವರೆದರೆ ನಾವೇಲ್ಲ ಕಾರ್ಯಕರ್ತರು ರಾಜ್ಯದ ಜನರು ಸುಮ್ನಿ ಇರೋದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಯಡಿಯೂರಪ್ಪ ನವರು ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ.ಅವರು ಎಲ್ಲಿ ಕೂಡ ವಿಜಯೆರಂದ್ರ ಸಿಎಂ ಮಾಡುತ್ತೇನೆ ಎಂದು ಹೇಳಿಲ್ಲ.ನಾವು ಹೇಳುತ್ತಿದ್ದೇವೆ ವಿಜಯೇಂದ್ರರನ್ನು ಮುಂದಿನ ಸಿಎಂ ಅಗುತ್ತಾರೆ ಅದನ್ನು ತಪ್ಪಿಸಲು ಯಾವ ದುಷ್ಟಗ್ರಹದಿಂದ ಸಾಧ್ಯವಾಗುವುದಿಲ್ಲ ಎಂದರು.