ಉಡುಪಿ:- ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಲಿಯಲ್ಲಿ ಸತ್ಯನಾರಾಯಣ ಪೂಜೆ ಮತ್ತು ಯಕ್ಷಗಾನದ ಟೆಂಟ್ ಗೆ ಮೂರು ಬಾರಿ ನುಗ್ಗಿದ ಪೊಲೀಸರು ಮಾಡಿದ್ದು ಇದನ್ನೇ ಎಂದು ಶಿರ್ಲಾಲು ಗ್ರಾಮಸ್ಥರು ದೂರಿದ್ದಾರೆ.
ಕರ್ನಾಟಕದಲ್ಲಿ ದಿನನಿತ್ಯ ಹಗಲು ದರೋಡೆಯಾಗುತ್ತಿದೆ: ಸರ್ಕಾರದ ವಿರುದ್ಧ ಬೊಮ್ಮಾಯಿ ಆಕ್ರೋಶ!
ವಿಚಾರದಲ್ಲಿ ಹೊಸ ತಿರುವು ಪಡೆದಿದೆ. ಕಾಂಗ್ರೆಸ್ ಬಿಜೆಪಿ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಶಿರ್ಲಾಲು ಪಂಚಾಯತ್ ವ್ಯಾಪ್ತಿಯ ಮುಂಡ್ಲಿಯಲ್ಲಿ ಸಾರ್ವಜನಿಕರು ಸತ್ಯನಾರಾಯಣ ಪೂಜೆಯನ್ನು ಆಯೋಜಿಸಿದ್ದರು. ರಾತ್ರಿ ಲವಕುಶ ಮತ್ತು ಜಾಂಬವತಿ ಕಲ್ಯಾಣ ಎಂಬ ಕಥಾಭಾಗದ ಯಕ್ಷಗಾನ ಆಯೋಜಿಸಲಾಗಿತ್ತು. ಇದಕ್ಕೆ ಸ್ಥಳೀಯ ಕಾಂಗ್ರೆಸ್ ಗ್ರಾಮ ಪಂಚಾಯತ್ ಸದಸ್ಯ ಅಡ್ಡಿಪಡಿಸಿದ್ದಾರೆ ಗ್ರಾಮಸ್ಥರು ದೂರಿದ್ದರು. ನಂತರ ಪೊಲೀಸರು, ಗ್ರಾಮಸ್ಥರು, ಪೂಜಾ ಸಮಿತಿಯ ಭಕ್ತರ ನಡುವೆ ಜಟಾಪಟಿ ಏರ್ಪಟ್ಟಿತ್ತು.
20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ತಂಡ ಕಳೆದ ಒಂದು ವರ್ಷದಿಂದ ಯಕ್ಷಗಾನದ ಹೆಜ್ಜೆ, ಪ್ರಸಂಗದ ತಯಾರಿಯನ್ನು ಮಾಡಿಕೊಂಡಿದ್ದರು. ಕಾರ್ಯಕ್ರಮಕ್ಕೆ ಪರವಾನಿಗೆ ಪಡೆಯಲು ಹೋದಾಗ ಪಿಡಿಒ ಮೂರು ದಿನ ರಜೆಯಲ್ಲಿದ್ದರು. ಪೊಲೀಸರು ಪಂಚಾಯತ್ ಪರವಾಗಿಗೆ ಇಲ್ಲದೆ ಮೈಕ್ ಹಾಕಲು ನಿರಾಕರಿಸಿದ್ದರು. ಇದರ ಹಿಂದೆ ರಾಜಕೀಯ ಕುತಂತ್ರ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.