ಚಿತ್ರದುರ್ಗ: ಜಾಮೀನು ಮೇಲೆ ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಅವರನ್ನು ರೇಣುಕಾಸ್ವಾಮಿ ಕುಟುಂಬ ಭೇಟಿಯಾಗಿದ್ದು, ಹಣ ಪಡೆದು ರಾಜಿಯಾಗಿದೆ. ಹೊಸ ಕಾರನ್ನು ಆ ಕುಟುಂಬ ಬುಕ್ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಯೊಂದು ಬಾರಿ ವೈರಲ್ ಆಗಿತ್ತು. ಇದೀಗ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡ್ರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾವು ದರ್ಶನ್ ಭೇಟಿಯಾಗಿಲ್ಲ, ಅವರು ಸಹ ನಮ್ಮನ್ನು ಭೇಟಿಯಾಗಿಲ್ಲ. ಅಲ್ಲದೇ ನಾವು ಯಾವುದೇ ಕಾರು ಖರೀದಿಸಿಲ್ಲ. ನಮಗೆ ಹಳೆಯ ಬೈಕ್ ರಿಪೇರಿ ಮಾಡಿಸಲು ಸಹ ದುಡ್ಡಿಲ್ಲ. ಯಾವ ಶೆಡ್ಗೂ ಹೋಗಿಲ್ಲ, ಹಣವನ್ನೂ ಪಡೆದಿಲ್ಲ. ಆದರೆ ಫೇಸ್ಬುಕ್ಕೊ ಅಥವಾ ಫೇಕ್ ಬುಕ್ಕೊ ನಮಗೆ ಗೊತ್ತಿಲ್ಲ. ನಾವೆಲ್ಲರೂ ರೇಣುಕಾಸ್ವಾಮಿ ಸಾವಿಂದ ಸಾಕಷ್ಟು ನೊಂದಿದ್ದೇವೆ. ದಯವಿಟ್ಟು ಆ ರೀತಿ ವದಂತಿ ಹರಡಿಸಬೇಡಿ ಎಂದು ಕಣ್ಣೀರಿಟ್ಟರು.
Pumpkin Seeds: ಕುಂಬಳಕಾಯಿ ಬೀಜ ತಿಂದ್ರೆ ಈ ಆರೋಗ್ಯ ಸಮಸ್ಯೆಗಳು ಹತ್ತಿರವೂ ಸುಳಿಯಲ್ಲ!
ಹಾಗೆಯೇ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ನ್ಯಾಯಯುತ ತನಿಖೆ ನಡೆಸಿರುವ ಸರ್ಕಾರವು, ದರ್ಶನ್ಗೆ ಬೇಲ್ ಸಿಕ್ಕಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಹೋಗಿರುವುದನ್ನು ನಮ್ಮ ಕುಟುಂಬದಿಂದ ಸ್ವಾಗತಿಸುತ್ತೇವೆ. ಈ ಕೇಸಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವ ಭರವಸೆ ಇದೆ. ಜೊತೆಗೆ ಸೊಸೆ ಸಹನಾಗೆ ಸರ್ಕಾರಿ ನೌಕರಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಸರ್ಕಾರದಿಂದ ಕೆಲಸ ನೀಡಲು ಸಾಧ್ಯವಿಲ್ಲವೆಂದು ನಮಗೆ ಹಿಂಬರಹ ಬಂದಿದೆ. ಇದು ನಮಗೆ ದೊಡ್ಡ ಆಘಾತ ತಂದಿದೆ. ಹೀಗಾಗಿ ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ನಮ್ಮ ಸೊಸೆಗೆ ಸರ್ಕಾರಿ ನೌಕರಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಯಾಕೆ ಈ ರೀತಿ ವದಂತಿ ಹರಡಿಸುತ್ತಿದ್ದಾರೆ ಎಂದು ನಾನು ಕಾನೂನು ಪಂಡಿತರನ್ನು ಕೇಳಲು ಇಚ್ಚಿಸುತ್ತೇನೆ. ಅವರು ದರ್ಶನ್ ಅಭಿಮಾನಿಗಳೋ ಮತ್ಯಾರೊ ನಮಗೆ ಗೊತ್ತಿಲ್ಲ. ಆದರೆ ಮತ್ತೊಮ್ಮೆ ಈ ರೀತಿ ವದಂತಿ ಹರಡಿಸಬೇಡಿ. ಒಂದು ವೇಳೆ ದರ್ಶನ್ ಭೇಟಿಗೆ ಧಾವಿಸಿದರೆ ಹಿತೈಷಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.