ಆಕಸ್ಮಿಕವಾಗಿ ಒಂಟಿ ನಳಿಕೆಯ ಬಂದೂಕಿನಿಂದ ಗುಂಡು ಹಾರಿ ವ್ಯಕ್ತಿಯೊಬ್ಬರು ಅಸು ನೀಗಿರುವ ಘಟನೆ ನೆನ್ನೆ ರಾತ್ರಿ ಮಡಿಕೇರಿ ತಾಲೂಕು ಚೇರಂಬಾಣೆಯಲ್ಲಿ ನಡೆದಿದೆ. ಚೇರಂಬಾಣೆಯ ಪೊನ್ನಚೆಟ್ಟಿರ ಮಿತ್ರ ಚಂಗಪ್ಪ (49) ಎಂಬುವವರು ಆಕಸ್ಮಿಕವಾಗಿ ತಗುಲಿದ ಗುಂಡೇಟಿಗೆ ಬಲಿಯಾದರಾಗಿದ್ದಾರೆ.
Pumpkin Seeds: ಕುಂಬಳಕಾಯಿ ಬೀಜ ತಿಂದ್ರೆ ಈ ಆರೋಗ್ಯ ಸಮಸ್ಯೆಗಳು ಹತ್ತಿರವೂ ಸುಳಿಯಲ್ಲ!
ಚೇರಂಬಾಣೆ ಪಟ್ಟಣದಲ್ಲಿ ವೈನ್ ಶಾಪ್ ಹೊಂದಿರುವ ಮಿತ್ರ ಅವರು ರಾತ್ರಿ 12 ಗಂಟೆ ಸಮಯದಲ್ಲಿ ವೈನ್ ಶಾಪ್ ಮುಚ್ಚಿ ಬಂದೂಕಿನೊಂದಿಗೆ ಹೊರಬಂದಿದ್ದಾರೆ.ಇದೇ ಸಂದರ್ಭ ಹಾಲು ಸರಬರಾಜಿನ ವಾಹನ ಬಂದಿದ್ದು, ಮಿತ್ರ ಚಂಗಪ್ಪ ಅವರು ಹಾಲು ಕೊಂಡುಕೊಳ್ಳಲೆಂದು ಕೈಯಲ್ಲಿದ್ದ ಬಂದೂಕು ಅನ್ನು ಸ್ಕೂಟರ್ ಮೇಲಿಟ್ಟಿದ್ದಾರೆ.
ಈ ಸಂದರ್ಭ ಕೆಳಗೆ ಬಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ಮಿತ್ರ ಅವರ ಸೊಂಟದ ಭಾಗಕ್ಕೆ ತಗುಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.