ದೊಡ್ಮನೆ ಆಟಕ್ಕೆ ಬ್ರೇಕ್ ಬೀಳಲು ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಸ್ಪರ್ಧಿಗಳು ತಮ್ಮನ್ನು ತಾವು ಕಾಪಾಡಿಕೊಳ್ಳಲು ಬಿಗ್ ಬಾಸ್ನಲ್ಲಿ ಇನ್ನೊಬ್ಬರ ಮೇಲೆ ದೂರಬೇಕಾದ ಅನಿವಾರ್ಯತೆ ಎದುರಾಗಿದೆ. ಇದೀಗ ಧನರಾಜ್ ಅವರು ಟಾಸ್ಕ್ನ ಮೋಸದಿಂದ ಗೆದ್ದ ಆರೋಪ ಇದೆ. ಕನ್ನಡಿಯಲ್ಲಿ ನೋಡಿ ಆಡಿದ್ದರಿಂದ ಆಟ ಅವರಿಗೆ ಸುಲಭ ಆಯಿತು.
ಹೀಗಾಗಿ, ಗೆಲುವು ಅವರದ್ದಾಯಿತು. ಆದರೆ, ಈ ಆಟವನ್ನು ಬಿಗ್ ಬಾಸ್ ರದ್ದು ಮಾಡಿರಲಿಲ್ಲ. ಧನರಾಜ್ ಮಿಡ್ ವೀಕ್ ಎಲಿಮಿನೇಷ್ನಿಂದ ಬವಾಚ್ ಆಗಲು ಈ ಗೆಲುವು ಸಾಕಷ್ಟು ಪ್ರಾಮುಖ್ಯತೆ ವಹಿಸಿತ್ತು. ಆದರೆ, ಈಗ ಈ ಗೆಲವು ಅವರಿಗೆ ಮುಳುವಾಗಿದೆ.
Thursday Color: ಗುರುವಾರ ಹಳದಿ ಬಣ್ಣದ ಬಟ್ಟೆ ಧರಿಸಿದರೆ ಎಷ್ಟೆಲ್ಲಾ ಪ್ರಯೋಜನಗಳೇನು ಗೊತ್ತಾ..?
ಜನವರಿ 15ರ ಎಪಿಸೋಡ್ನಲ್ಲಿ ಯಾವುದೇ ಎಲಿಮಿನೇಷನ್ ನಡೆಸಿರಲಿಲ್ಲ. ಇದಕ್ಕೆ ಕಾರಣ ಆಗಿದ್ದು ಧನರಾಜ್ ಮೋಸದಾಟ ಎಂದು ಬಿಗ್ ಬಾಸ್ ಹೇಳಿದ್ದಾರೆ. ‘ತಮ್ಮನ್ನು ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳುವಂತೆ’ ಧನರಾಜ್ ಕೋರಿದ್ದಾರೆ. ಅವರಿಗೆ ಎಲಿಮಿನೇಷನ್ ಶಿಕ್ಷೆ ಸಿಕ್ಕಿತೇ ಎನ್ನುವ ಪ್ರಶ್ನೆ ಮೂಡಿದೆ. ಜೊತೆಗೆ, ಕಣ್ಣೀರಿಟ್ಟಿದ್ದಾರೆ. ನಡೆದಿರೋ ಮೋಸಕ್ಕೆ ಶಿಕ್ಷೆ ಎಂಬಂತೆ ಎಲಿಮಿನೇಟ್ ಆಗುತ್ತಾರಾ? ಅನ್ನೋ ಪ್ರಶ್ನೆ ಎದ್ದಿದೆ. ಎಲ್ಲದಕ್ಕೂ ಇಂದಿನ ಸಂಚಿಕೆಯಲ್ಲಿ ಸ್ಪಷ್ಟನೆ ಸಿಗಲಿದೆ.