ಬೆಂಗಳೂರು: ಹೈಕೋರ್ಟ್ನಿಂದ ಜಾಮೀನು ಪಡೆದ ನಂತರ ನಟ ದರ್ಶನ್ ಮೈಸೂರಿನ ನಿವಾಸದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದೀಗ ಆರೋಪಿ ದರ್ಶನ್ ಅವರ ಗನ್ ಲೈಸನ್ಸ್ ಯಾಕೆ ರದ್ದು ಮಾಡಬಾರದು ಅಂತ ಪೊಲೀಸರು ನಟನಿಗೆ ಪತ್ರ ಬರೆದಿದ್ದರು.
ದರ್ಶನ್ ಅವರ ಗನ್ ಲೈಸೆನ್ಸ್ ಹಿಂಪಡೆಯಲು ಪೊಲೀಸರು ನಿರ್ಧಾರ ಮಾಡಿದ್ದರು. ಇದೀಗ ಪೊಲೀಸರ ಪತ್ರಕ್ಕೆ ದರ್ಶನ್ ಅವರು ಉತ್ತರ ನೀಡಿದ್ದಾರೆ. ಬೆಂಗಳೂರು ಆಡಳಿತ ವಿಭಾಗದ ಡಿಸಿಪಿಗೆ ದರ್ಶನ್ ಪತ್ರ ಬರೆದಿದ್ದಾರೆ.
Thursday Color: ಗುರುವಾರ ಹಳದಿ ಬಣ್ಣದ ಬಟ್ಟೆ ಧರಿಸಿದರೆ ಎಷ್ಟೆಲ್ಲಾ ಪ್ರಯೋಜನಗಳೇನು ಗೊತ್ತಾ..?
ನಟ ದರ್ಶನ್ ಪೊಲೀಸರಿಗೆ ಉತ್ತರ ನೀಡಿದ್ದು, ನನಗೆ ಗನ್ ಬೇಕೆ ಬೇಕು ಎಂದಿದ್ದಾರೆ. ನಾನೊಬ್ಬ ಸೆಲೆಬ್ರಿಟಿ, ನಾನು ಹೋದ ಕಡೆ ಬಂದ ಕಡೆ ಸಾಕಷ್ಟು ಜನ ಸೇರ್ತಾರೆ. ಈ ವೇಳೆ ನನ್ನ ಆತ್ಮರಕ್ಷಣೆ ಬಹಳ ಮುಖ್ಯವಾದ ವಿಷಯ ಆಗುತ್ತೆ. ನಾನು ಖಾಸಗಿ ಸೆಕ್ಯುರಿಟಿಯನ್ನು ನೇಮಿಸಿಕೊಂಡಿದ್ದರೂ, ವೈಯಕ್ತಿಕವಾಗಿ ಗನ್ ಲೈಸೆನ್ಸ್ ಅವಶ್ಯಕತೆ ಇರುತ್ತೆ. ಹೀಗಾಗಿ ನನ್ನ ಗನ್ ಲೈಸನ್ಸ್ ರದ್ದು ಮಾಡಬಾರದು ಅಂತ ಮನವಿ ಕೂಡ ಮಾಡಿದ್ದಾರೆ
ಅಲ್ಲದೆ ತಾವು ಹೇಳಿರುವಂತೆ ಈ ಪರವಾನಗಿ ಹೊಂದಿರೋ ಗನ್ ಬಳಸಿ. ನನ್ನ ಮೇಲೆ ಸದ್ಯ ಚಾಲ್ತಿಯಲ್ಲಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಯಾವುದೇ ಸಾಕ್ಷಿಗಳಿಗೆ ಬೆದರಿಕೆ ಹಾಕುವುದಿಲ್ಲ. ಒಂದು ವೇಳೆ ಅಂತಹ ಘಟನೆಗಳು ಆದರೆ ತಾವು ಸೂಕ್ತ ಜರುಗಿಸಬಹುದು ಎಂದು ದರ್ಶನ್ ಪೊಲೀಸರ ಪತ್ರಕ್ಕೆ ಉತ್ತರ ಕೊಟ್ಟಿದ್ದಾರೆ.