ಬಳ್ಳಾರಿ: ಪಂಚನಾಮೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಪೋಕ್ಸೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಸೆರೆಹಿಡಿದಿದ್ದಾರೆ. ಆರೋಪಿಯನ್ನು ಕಮಲಾಪುರದ ಮಂಜುನಾಥ್ ಎಂದು ಗುರುತಿಸಲಾಗಿದ್ದು, ಸದ್ಯ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ( ವಿಮ್ಸ್)ಕ್ಕೆ ದಾಖಲಿಸಲಾಗಿದೆ.
ಆರೋಪಿ ಮಂಜುನಾಥ ಇತ್ತೀಚೆಗೆ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ತಲೆಮರೆಸಿಕೊಂಡಿದ್ದ. ಬುಧವಾರ ರಾತ್ರಿ ಆತನನ್ನು ತೋರಣಗಲ್ಲಿನಲ್ಲಿ ಬಂಧಿಸಲಾಗಿತ್ತು.ಇಂದು ಮುಂಜಾನೆ ಆತನನ್ನು ಪಂಚನಾಮೆ ಕರೆದೊಯ್ಯಲಾಯಿತು.
Thursday Color: ಗುರುವಾರ ಹಳದಿ ಬಣ್ಣದ ಬಟ್ಟೆ ಧರಿಸಿದರೆ ಎಷ್ಟೆಲ್ಲಾ ಪ್ರಯೋಜನಗಳೇನು ಗೊತ್ತಾ..?
ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಆತ ಯತ್ನಿಸಿದ್ದ ಎನ್ನಲಾಗಿದೆ. ಆಗ ಸಿಬ್ಬಂದಿ ಆರೋಪಿ ಕಾಲಿಗೆ ಗುಂಡಿನೇಟು ಹೊಡೆಯಬೇಕಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದ್ದಾರೆ.