ಅದು ಏಷ್ಯಾದಲ್ಲಿ ಅತಿ ಎತ್ತರವಾದ ಹನುಮನ ಏಕಶಿಲಾ ವಿಗ್ರಹ, ಶಿಲ್ಪಿಗಳ ದಶಕಗಳ ಕಾಲ ಶ್ರಮದ ಫಲವಾಗಿ ಹನುಮನ ವಿಗ್ರಹವನ್ನು ಇಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಲಕ್ಷಾಂತರ ಶ್ರೀರಾಮ ಭಕ್ತರ ಸಮ್ಮುಖದಲ್ಲಿ ಅನಾವರಣಗೊಂಡಿದೆ… ಅದು ಎಲ್ಲಿ ಅಂತೀರಾ.. ಈ ಸ್ಟೋರಿ ನೋಡಿ… ಬೆಂಗಳೂರಿನ ದಕ್ಷಿಣ ಅಯೋಧ್ಯೆ ಎಂದು ಹೆಸರುವಾಸಿಯಾಗಿರುವ ಬೆಂಗಳೂರಿನ ಕಾಚರಕನಹಳ್ಳಿಯ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯದ ಆವರಣದಲ್ಲಿ ಬೃಹತ್ ರೂಪದ ಹನುಮನ ವಿಗ್ರಹವನ್ನುಪ್ರತಿಷ್ಠಾಪನೆ ಮಾಡಲಾಯಿತು.
ಶ್ರೀರಾಮ ಚೈತನ್ಯ ವರ್ದಿನಿ ಸಭಾ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡಿರುವ ಈ ವಿಗ್ರಹವು ಸುಮಾರು 72 ಅಡಿ ಎತ್ತರ ಹಾಗೂ 500ಕ್ಕೂ ಹೆಚ್ಚು ಟನ್ ಗಳಷ್ಟು ತೂಕವನ್ನು ಹೊಂದಿದೆ.. ಹನುಮನ ವಿಗ್ರಹದ ಜೊತೆ ರಾಮ ಲಕ್ಷ್ಮಣ ವಿಗ್ರಹವು ಆನಾವರಣಗೊಂಡಿದೆ.. ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪೇಜಾವರ ಮಠದ ಶ್ರೀ ಪ್ರಸನ್ನ ತೀರ್ಥ ಸ್ವಾಮಿ ಅವರ ಸಾನಿಧ್ಯದಲ್ಲಿ ಹನುಮನ ಮೂರ್ತಿ ಪ್ರತಿಷ್ಠಾಪಿಸಲಾಯಿತು..
Thursday Color: ಗುರುವಾರ ಹಳದಿ ಬಣ್ಣದ ಬಟ್ಟೆ ಧರಿಸಿದರೆ ಎಷ್ಟೆಲ್ಲಾ ಪ್ರಯೋಜನಗಳೇನು ಗೊತ್ತಾ..?
ಇನ್ನು ಒಟ್ಟು 72 ಅಡಿ ಎತ್ತರದ ವಿಗ್ರಹ ಇದಾಗಿದ್ದು ಮೂರು ವರ್ಷದ ಹಿಂದೆ ಈ ವಿಗ್ರಹವನ್ನು ಹೊಸಕೋಟೆ ಸಮೀಪದ ಒಂದು ಪ್ರದೇಶದಿಂದ ಇಲ್ಲಿಗೆ ತರಲಾಗಿದೆ. ಕೇವಲ ವಿಗ್ರಹವನ್ನು ಸಾಗಿಸಲು ಸುಮಾರು 30 ದಿನ ಸಮಯ ಹಿಡಿದಿದ್ದು ಸಾವಿರ ಟನ್ ತೂಕದ ಬಂಡೆಯನ್ನು ಇಲ್ಲಿಗೆ ಸಾಗಿಸಿ, ಇಲ್ಲಿಯೇ ಶಿಲ್ಪಿಗಳು ಕೆತ್ತನೆ ಮಾಡಿದ್ದಾರೆ. ರಾಮ-ಲಕ್ಷ್ಮಣ ಸಮೇತ ಹನುಮನ ವಿಗ್ರಹಕ್ಕೆ ಕುಂಭಾಭಿಷೇಕ ನೆರವೇರಿಸಲಾಯಿತು. ವಿಗ್ರಹದ ಸಣ್ಣಪುಟ್ಟ ಕಾರ್ಯಗಳು ಬಾಕಿಯಿದ್ದು,
ಅದಷ್ಟು ಬೇಗ ಕಾರ್ಯಗತಗೊಳಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದೆಂದು ಶ್ರೀರಾಮ ಚೈತನ್ಯ ವರ್ದಿನಿ ಸಭಾ ಟ್ರಸ್ಟ್ ನ ಅಧ್ಯಕ್ಷ ಎಂ.ಎನ್.ರೆಡ್ಡಿ ತಿಳಿಸಿದರು. ಒಟ್ಟಿನಲ್ಲಿ 72 ಅಡಿ ಎತ್ತರದ ಹನುಮನ ವಿಗ್ರಹವು ಬೆಂಗಳೂರಿನಲ್ಲಿ ಪ್ರತಿಷ್ಠಾಪನೆ ಆಗಿರುವುದರಿಂದ ಬೆಂಗಳೂರು ನಗರವು ಏಷ್ಯಾದಲ್ಲಿ ಅತಿ ದೊಡ್ಡ ಏಕಶಿಲಾ ವಿಗ್ರಹ ಹೊಂದಿರುವ ನಗರ ಎಂಬ ಎಂಬ ಖ್ಯಾತಿಯನ್ನು ಪಡೆದಿದ್ದು, ಬೆಂಗಳೂರಿನ ಜನ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ..