ಭಾರತೀಯ ಮಹಿಳಾ ತಂಡ ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಮಹಿಳಾ ತಂಡ ಹೊಸ ಇತಿಹಾಸ ನಿರ್ಮಿಸಿದೆ.
ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಮದ್ಯ ಸೇವಿಸಿ ಕಾರು ಹರಿಸಿದ ಪ್ರಕರಣ: ಆರೋಪಿ ವಿರುದ್ಧ FIR!
ರಾಜ್ಕೋಟ್ನ ನಿರಂಜನ್ ಶಾ ಮೈದಾನದಲ್ಲಿ ನಡೆದ ಐರ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಟೀಮ್ ಇಂಡಿಯಾ ಪರ ಸ್ಮೃತಿ ಮಂಧಾನ ಹಾಗೂ ಪ್ರತೀಕಾ ರಾವಲ್ ಭರ್ಜರಿ ಶತಕ ಸಿಡಿಸಿದರು. 80 ಎಸೆತಗಳನ್ನು ಎದರುರಿಸಿದ ಸ್ಮೃತಿ 135 ರನ್ ಬಾರಿಸಿದರೆ, ಪ್ರತೀಕಾ ರಾವಲ್ 129 ಎಸೆತಗಳಲ್ಲಿ 154 ರನ್ ಸಿಡಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಚಾ ಘೋಷ್ 42 ಎಸೆತಗಳಲ್ಲಿ 59 ರನ್ ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 435 ರನ್ ಕಲೆಹಾಕಿತು.
ಇದರೊಂದಿಗೆ ಭಾರತೀಯ ಏಕದಿಕ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಪೇರಿಸಿದ ದಾಖಲೆ ಟೀಮ್ ಇಂಡಿಯಾ ಮಹಿಳಾ ತಂಡದ ಪಾಲಾಯಿತು. ಅಂದರೆ ಈ ಹಿಂದೆ ಭಾರತೀಯ ಪುರುಷರ ತಂಡ ಒನ್ ಡೇ ಕ್ರಿಕೆಟ್ನಲ್ಲಿ ಬರೆದಿದ್ದ ಗರಿಷ್ಠ ಸ್ಕೋರ್ ದಾಖಲೆಯನ್ನು ಮಹಿಳಾ ತಂಡ ಅಳಿಸಿ ಹಾಕಿದೆ.