ಉತ್ತರ ಕನ್ನಡ: ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಮದ್ಯ ಸೇವಿಸಿ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರೋಷನ್ ಫರ್ನಾಂಡಿಸ್ ವಿರುದ್ಧ FIR ದಾಖಲಾಗಿದೆ.
ದ್ದಾಪುರದ ರವೀಂದ್ರ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜಾತ್ರೆಗೆ ಮಂಗಳವಾರ ರಾತ್ರಿ ಬಂದಿದ್ದ ಭಕ್ತರ ಮೇಲೆ ಬೇಕಾಬಿಟ್ಟಿಯಾಗಿ ರೋಷನ್ ಕಾರು ಚಲಾಯಿಸಿದ್ದನು. ಈ ವೇಳೆ ಯುವತಿಯೊಬ್ಬರು ಸಾವನ್ನಪ್ಪಿದ್ದು, ಎಂಟು ಜನರು ಗಾಯಗೊಂಡಿದ್ದರು.
ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯೇ ಈತ ಮನೆ ಹೊಂದ್ದಾನೆ. ಇಸ್ರೇಲ್ನಲ್ಲಿ ಉದ್ಯೋಗಮಾಡಿಕೊಂಡಿದ್ದ ಈತ ಮರಳಿ ಸಿದ್ದಾಪುರಕ್ಕೆ ಬಂದಿದ್ದ. ಕೈಯಲ್ಲಿ ಏನು ಕೆಲಸವಿಲ್ಲದಿದ್ದರೂ ಬಿಂದಾಸ್ ಆಗಿ ಖರ್ಚು ಮಾಡಿಕೊಂಡು ಮದ್ಯವೆಸನಿಯಾಗಿದ್ದ. ಕಳೆದ ಎರಡು ದಿನದ ಹಿಂದೆ ಇದೇ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನೆಯಿಂದ ಕೋಪಗೊಂಡು ಗಲಾಟೆ ಮಾಡಿದ್ದ ಎಂದು ಕೆಲವರು ಹೇಳಿದ್ದಾರೆ.