ಸಂಬಂಧವೆಂದರೆ ಅಲ್ಲಿ ನಂಬಿಕೆ, ವಿಶ್ವಾಸ, ಗೌರವ ಮತ್ತು ಪ್ರೀತಿ ಇರಲೇಬೇಕು. ಇವೆಲ್ಲವೂ ಇಲ್ಲವೆಂ ದಾದರೆ ಆಗ ಆ ಸಂಬಂಧವು ಹೆಚ್ಚು ಕಾಲ ಬಾಳಿಕೆ ಬರದು. ದಂಪತಿಯು ತಮ್ಮ ಬಾಂಧ ವ್ಯವನ್ನು ಬಲಪಡಿಸುವ ಸಲುವಾಗಿ ತುಂಬಾ ಶ್ರಮ ಪಡುವರು.
ಕೊನೆಗೂ ಸಿಗದ ಚಿರತೆ: ಮೈಸೂರು ಇನ್ಫೋಸಿಸ್ ಆವರಣದಲ್ಲಿ ಕಾರ್ಯಾಚರಣೆ ಸ್ಥಗಿತ!
ಆದರೂ ಕೆಲವೊಂದು ಸಂಬಂಧಗಳಲ್ಲಿ ಪ್ರೀತಿಗಿಂತ ಹೆಚ್ಚು ಜಗಳವೇ ಆಗುತ್ತಾ ಇರುತ್ತದೆ. ಜಗಳ ಕಡಿಮೆ ಮಾಡಿ, ಸಂಗಾತಿ ಜತೆಗಿನ ಸಂಬಂಧವನ್ನು ಬಲಪಡಿಸಬೇಕಾದರೆ ಆಗ ಸಂವಹನ ಹಾಗೂ ಅನ್ಯೋ ನ್ಯತೆಯು ಅತೀ ಮುಖ್ಯ. ಆರೋಗ್ಯಕಾರಿ ಸಂಬಂಧವನ್ನು ಉಳಿಸಲು ಕೆಲವೊಂದು ಸೂತ್ರಗಳನ್ನು ತಿಳಿದುಕೊಂಡರೆ ಒಳ್ಳೆಯದು.
ಯಾವುದೇ ಸಂಬಂಧವು ಶಾಶ್ವತವಾಗಿ ಉಳಿಯಲು ಮತ್ತು ಸಂತೋಷವಾಗಿರಲು, ನೀವು ಚಾಣಕ್ಯ ಸೂಚಿಸಿದ ಕೆಲವು ಅಭ್ಯಾಸಗಳನ್ನು ಅನುಸರಿಸಬೇಕು. ಸಂಬಂಧವನ್ನು ಉಳಿಸಿಕೊಳ್ಳುವ ಅಭ್ಯಾಸಗಳು ಯಾವವು ಎಂದು ತಿಳಿಯೋಣ ಬನ್ನಿ.
ನಿಮ್ಮ ದೌರ್ಬಲ್ಯಗಳ ಕುರಿತು ನಿಮ್ಮ ಸಂಗಾತಿಗೆ ಎಂದಿಗೂ ಹೇಳಬೇಡಿ ಎಂದಿದ್ದಾರೆ ಚಾಣಕ್ಯರು. ಏಕೆಂದರೆ ಆಕೆ ಅದನ್ನು ನಿಮ್ಮ ವಿರುದ್ಧ ನಿಮ್ಮ ದೌರ್ಬಲ್ಯವನ್ನು ಸಂದರ್ಭಕ್ಕೆ ತಕ್ಕಂತೆ ಬಳಸಬಹುದು. ಅದು ಸಂಸಾರದಲ್ಲಿ ವ್ಯತಿರಿಕ್ತ ಪರಿಣಾಮವನ್ನು ಕೂಡ ಉಂಟುಮಾಡಬಹುದು.
ಅವಮಾನವಾದರೆ ಹೆಂಡತಿಗೂ ಹೇಳಬಾರದು. ಹೌದು, ಆಚಾರ್ಯ ಚಾಣಕ್ಯರ ಪ್ರಕಾರ, ನಿಮಗೇನಾದ್ರೂ ಅಪಮಾನವಾದ್ರೆ ಅದನ್ನು ಪತ್ನಿಯಿಂದ ಮುಚ್ಟಿಡಬೇಕಂತೆ ಏಕೆಂದರೆ ಭವಿಷ್ಯದಲ್ಲಿ ಅವಳು ಆ ಅವಮಾನವನ್ನು ನಿಮಗೆ ನೆನಪಿಸುವ ಮತ್ತು ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ಸಮಯ ಬರಬಹುದು ಹಾಗಾಗಿ ಹೇಳಬೇಡಿ ಎಂದಿದ್ದಾರೆ.
ನೀವು ಮಾಡುವ ದಾನ: ಬಲಗೈಯಿಂದ ಕೊಟ್ಟ ದಾನ ಎಡಗೈಗೆ ತಿಳಿಯಬಾರದು ಎಂದು ಹೇಳಲಾಗುತ್ತದೆ. ಮಾತ್ರವಲ್ಲ ನೀವು ಮಾಡಿದ ದಾನದ ಕುರಿತು ನಿಮ್ಮ ಹೆಂಡತಿಗೂ ಹೇಳಬಾರದಂತೆ. ಏಕೆಂದರೆ ಇದು ನಿಮ್ಮ ನಡುವಿನ ಜಗಳಕ್ಕೂ ಕಾರಣವಾಗಬಹುದು.
ನಿಮ್ಮ ಸಂಬಳ: ಹೌದು, ಆಚಾರ್ಯ ಚಾಣಕ್ಯರ ಪ್ರಕಾರ ನಿಮ್ಮ ಎಷ್ಟು ಸಂಬಳ ಬರುತ್ತದೆ ಎಂದು ಹೆಂಡತಿಗೆ ಹೇಳಬಾರದಂತೆ. ಒಂದು ವೇಳೆ ಹೇಳಿದರೆ ಅದು ನಿಮ್ಮ ಖರ್ಚುಗಳ ನಿಯಂತ್ರಣಕ್ಕೆ ಅವರು ಒತ್ತಡ ಹಾಕಬುದು. ಇದರಿಂದ ಅಗತ್ಯಕ್ಕೆ ಕೂಡ ಖರ್ಚು ಮಾಡಲು ಕಷ್ಟವಾಗುತ್ತದೆ.
ನೀವು ಕೊಡುವ ಸಾಲ: ಹೌದು, ಚಾಣಕ್ಯ ಆಚಾರ್ಯರ ಪ್ರಕಾರ ನೀವು ಯಾರಿಗಾದರೂ ಸಾಲ ಕೊಟ್ಟಿದ್ದರೆ ಅಥವಾ ದೇಣಿಗೆಯಾಗಿ ಕೊಟ್ಟಿದ್ದರೂ ಆ ವಿಷಯಗಳನ್ನು ನಿಮ್ಮ ಹೆಂಡತಿಯೊಂದಿಗೆ ಹಂಚಿಕೊಳ್ಳಬಾರದು ಎನ್ನುತ್ತಾರೆ ಚಾಣಕ್ಯ. ಏಕೆಂದರೆ ಇಂತಹ ವಿಷಯಗಳು ಕೆಲವು ಮಹಿಳೆಯರಿಗೆ ಇಷ್ಟವಾಗುವುದಿಲ್ಲ.
ಹೀಗೆ ಆಚಾರ್ಯ ಚಾಣಕ್ಯರು ನೀಡಿರುವ ಸಲಹೆಗಳನ್ನು ಪಾಲಿಸುವುದರಿಂದ ಪತಿ -ಪತ್ನಿ ನಡುವಿನ ಸಂಬಂಧವನ್ನು ಶಾಶ್ವತವಾಗಿ ಉಳಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಮಾತ್ರವಲ್ಲ ಆಚಾರ್ಯ ಚಾಣಕ್ಯರ ಈ ಬಗೆಯ ನೀತಿಯನ್ನು ಅನುಸರಿಸುವುದರಿಂದ ಜೀವನದಲ್ಲಿ ಯಶಸ್ಸನ್ನು ಕೂಡ ಗಳಿಸಬಹುದಾಗಿದೆ.