ಬೆಳಗಾವಿ: ಬೆಂಗಳೂರಲ್ಲಿ ಬೆಳಗ್ಗೆ ನಡೆದ ಮಾದ್ಯಮಗೋಷ್ಠಿಯಲ್ಲಿ ನನ್ನ ಕೆಲ ಹೇಳಿಕೆ ತಿರುಚಲಾಗಿದೆ. ಡಿಕೆ ಶಿವಕುಮಾರ ಬದಲಾವಣೆಗೆ ನಾನು ಯಾವುದೆ ಹೇಳಿಕೆ ನೀಡಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಬದಲಾವಣೆ ವಿಚಾರದಲ್ಲಿ ಯಾವುದೇ ರೀತಿ ಹೇಳಿಕೆ ನೀಡಿಲ್ಲ. ಬೆಂಗಳೂರಲ್ಲಿ ಬೆಳಗ್ಗೆ ನಡೆದ ಮಾದ್ಯಮಗೋಷ್ಠಿಯಲ್ಲಿ ನನ್ನ ಕೆಲ ಹೇಳಿಕೆ ತಿರುಚಲಾಗಿದೆ. ಡಿಕೆ ಶಿವಕುಮಾರ ಬದಲಾವಣೆಗೆ ನಾನು ಯಾವುದೆ ಹೇಳಿಕೆ ನೀಡಿಲ್ಲ
ಪಕ್ಷದ ಸಂಘಟನೆ, ಚುನಾವಣೆ ದೃಷ್ಟಿಯಿಂದ ಕೆಲವು ಸಲಹೆಗಳನ್ನು ನೀಡಿದ್ದೇನೆ. ಕೆಲವು ಮಾದ್ಯಮಗಳಲ್ಲಿನ ವರದಿ ಗಮನಿಸಿ ಸಾರ್ವಜನಿಕರು ತಪ್ಪು ತಿಳಿದುಕೊಳ್ಳಬೇಡಿ. ಮುಂದಿನ ವಾರ ದೆಹಲಿಗೆ ಹೋಗುತ್ತೇನೆಂದು ಹೇಳಿದ್ದು, ಹೈಕಮಾಂಡ್ ಭೇಟಿಗಲ್ಲ, ಕರ್ನಾಟಕ ಭವನದ ಕಟ್ಟಡ ಉದ್ಘಾಟನೆಗೆ ಹೊರಟ್ಟಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ ಎಂದರು.